ಕರ್ನಾಟಕ

karnataka

ETV Bharat / city

ಜನರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಇಂಧನ ದರ ಇಳಿಸಲಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ - pralhad joshi reaction about fuel price decrease

ಜನರಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ರಾಜ್ಯದಲ್ಲಿ ಒಟ್ಟಾರೆಯಾಗಿ ಪೆಟ್ರೋಲ್ ಮೇಲೆ 12 ರೂ. ಹಾಗು ಡೀಸೆಲ್ ಮೇಲೆ 17 ರೂ. ಕಡಿಮೆ ಮಾಡಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

Union Minister pralhad joshi
ಪ್ರಲ್ಹಾದ್ ಜೋಶಿ

By

Published : Nov 4, 2021, 3:26 PM IST

ಹುಬ್ಬಳ್ಳಿ:ಡಿ ಕಂಟ್ರೋಲ್ ಆಗಿದ್ದ ಪೆಟ್ರೋಲ್ ಹಾಗು ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಜನಕ್ಕೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಕಡಿಮೆಗೊಳಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಇಂಧನ ದರ ಇಳಿಕೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ರಾಜ್ಯದಲ್ಲಿ ಒಟ್ಟಾರೆಯಾಗಿ ಪೆಟ್ರೋಲ್ ಬೆಲೆಯಲ್ಲಿ 12 ರೂ., ಹಾಗು ಡೀಸೆಲ್ ಮೇಲಿನ 17 ರೂ. ಕಡಿಮೆ ಮಾಡಿದ್ದೇವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ 100 ದಿನ ಪೂರೈಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಉತ್ತಮ ಕೆಲಸ ನಡೆಯುತ್ತಿದೆ. ಈ ಸರ್ಕಾರ ಪೂರ್ಣ ಅವಧಿ ಮುಗಿಸುವುದರಲ್ಲಿ ಎರಡು ಮಾತಿಲ್ಲ. ಮುಂದಿನ ಅವಧಿ ಕೂಡಾ ಬಿಜೆಪಿ ಸರ್ಕಾರದ ಅವಧಿಯಾಗಲಿದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಇಂಧನ ದರ ಇಳಿಕೆಗೆ ಬಿಎಸ್​ವೈ ಮೆಚ್ಚುಗೆ: ಬೆಲೆ ಇಳಿದರೂ ನೆಟ್ಟಿಗರಿಂದ ಟೀಕೆಗೊಳಗಾದ ಸರ್ಕಾರ

ABOUT THE AUTHOR

...view details