ಕರ್ನಾಟಕ

karnataka

ETV Bharat / city

'ಎಂದೆಂದೂ ನಿನ್ನನು ಮರೆತು ಬದುಕಿರಲಾರೆ..' ಮಗಳ ಮದುವೆಯಲ್ಲಿ ಸಚಿವ ಪ್ರಹ್ಲಾದ್ ಜೋಶಿ ಡ್ಯಾನ್ಸ್.. - Pralhad Joshi at Hubli

ಬುಧವಾರ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಮಗಳ ಮದುವೆ ಸಮಾರಂಭದಲ್ಲಿ ಪತ್ನಿಯೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಡ್ಯಾನ್ಸ್ ಮಾಡಿದ್ದು, ವಿಡಿಯೋ ವೈರಲ್​ ಆಗಿದೆ.

joshi
ಪುತ್ರಿ ಅರ್ಪಿತಾ ಮದುವೆ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಡ್ಯಾನ್ಸ್

By

Published : Sep 2, 2021, 12:52 PM IST

ಹುಬ್ಬಳ್ಳಿ: ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ತಮ್ಮ ಮಗಳ ಮದುವೆ ಸಮಾರಂಭದಲ್ಲಿ ಪತ್ನಿಯೊಂದಿಗೆ ಡಾ. ರಾಜಕುಮಾರ್​​ ಅಭಿನಯದ ಎರಡು ಕನಸು ಚಿತ್ರದ 'ಎಂದೆಂದೂ ನಿನ್ನನು ಮರೆತು ಬದುಕಿರಲಾರೆ' ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಪುತ್ರಿ ಅರ್ಪಿತಾ ಮದುವೆ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಡ್ಯಾನ್ಸ್

ಬುಧವಾರ ರಾತ್ರಿ ವಾಣಿಜ್ಯನಗರಿಯಲ್ಲಿ ನಡೆದ ಪುತ್ರಿ ಅರ್ಪಿತಾ ಹಾಗೂ ಹೃಷಿಕೇಶ್​ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ಜೋಶಿ ದಂಪತಿ ವೇದಿಕೆ ಮೇಲೆ ಡ್ಯಾನ್ಸ್ ಮಾಡಿ ಮನರಂಜಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಪ್ರಹ್ಲಾದ್ ಜೋಶಿ ಮಗಳ ಮದುವೆ ಸಮಾರಂಭ

ಇದನ್ನೂ ಓದಿ:ಕೇಂದ್ರ ಸಚಿವರ ಮಗಳ ವಿವಾಹದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ

ರಾಜ್ಯಪಾಲ ತಾವರ್​​ ಚಂದ್ ಗೆಹ್ಲೋಟ್, ಸಭಾಪತಿ ಬಸವರಾಜ್ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವ ಆರ್ ಅಶೋಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಹಾಲಪ್ಪ ಆಚಾರ್, ಶಂಕರ್ ಪಾಟೀಲ್ ಮುನೇನಕೊಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರಹ್ಲಾದ್ ಜೋಶಿ ಮಗಳ ಮದುವೆ ಸಮಾರಂಭ

ABOUT THE AUTHOR

...view details