ಕರ್ನಾಟಕ

karnataka

ETV Bharat / city

ದಿಗ್ಗಜ ಕವಿಯನ್ನು ಕಳೆದುಕೊಂಡಿದ್ದೇವೆ.. ಚೆನ್ನವೀರ ಕಣವಿ ನಿಧನಕ್ಕೆ ಕೇಂದ್ರ ಸಚಿವ ಜೋಶಿ ಸಂತಾಪ - ಚೆನ್ನವೀರ ಕಣವಿ ನಿಧನಕ್ಕೆ ಕೇಂದ್ರ ಸಚಿವ ಜೋಶಿ ಸಂತಾಪ

ಸಾಹಿತ್ಯ ಲೋಕದ ದಿಗ್ಗಜ ಕವಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ನಾಡೋಜ ಚೆನ್ನವೀರ ಕಣವಿ ಅವರ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಾಪ ಸೂಚಿಸಿದರು.

chennaveera-kanavi
ಚೆನ್ನವೀರ ಕಣವಿ

By

Published : Feb 16, 2022, 10:49 PM IST

Updated : Feb 16, 2022, 10:58 PM IST

ಧಾರವಾಡ:ಸಾಹಿತ್ಯ ಲೋಕದ ದಿಗ್ಗಜ ಕವಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ನಾಡೋಜ ಚೆನ್ನವೀರ ಕಣವಿ ಅವರ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಾಪ ಸೂಚಿಸಿದರು.

ನಗರದಲ್ಲಿ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚೆನ್ನವೀರ ಕಣವಿ ಅವರು ಮುಲ್ಕಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದರು. ಕನ್ನಡ ನಾಡು, ಸಂಸ್ಕೃತಿ ಬಗ್ಗೆ ರೋಮಾಂಚನ ಆಗುವಂಥ ಕವಿತೆಗಳನ್ನ ನೀಡಿದ್ದಾರೆ. ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ನಾನು ಅವರನ್ನ ಹಲವು ಬಾರಿ ಭೇಟಿಯಾಗಿದ್ದೇನೆ ಎಂದರು.

ಚೆನ್ನವೀರ ಕಣವಿ ನಿಧನಕ್ಕೆ ಕೇಂದ್ರ ಸಚಿವ ಜೋಶಿ ಸಂತಾಪ

ಯಾವತ್ತೂ ನನಗೆ ಅದು ಕೊಡಿ, ಇದು ಕೊಡಿ ಎಂದು ಕೇಳಿಲ್ಲ. ಅವರು ಕೇಳದಿದ್ದರೂ ಅವರನ್ನ ಪ್ರಶಸ್ತಿಗಳು ಹುಡುಕಿ ಬಂದಿವೆ. ಕೇಂದ್ರ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ‌. ಅವರು ನಮ್ಮ ಜೊತೆ ದೈಹಿಕವಾಗಿ ಇಲ್ಲದಿದ್ದರೂ ಅವರ ಕಾರ್ಯ, ಕಾವ್ಯಗಳು ಜೊತೆಗಿವೆ. ಅವರ ಕಾವ್ಯಗಳನ್ನ ಓದುತ್ತಲೇ ನಾವು ಬೆಳೆದವರು ಎಂದರು.

ಓದಿ:ರಾಷ್ಟ್ರ ಧ್ವಜ ಹಿಡಿದು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಸದನದ ಬಾವಿಗಿಳಿದು ಕೈ ಶಾಸಕರ ಪ್ರತಿಭಟನೆ

Last Updated : Feb 16, 2022, 10:58 PM IST

For All Latest Updates

TAGGED:

ABOUT THE AUTHOR

...view details