ಹುಬ್ಬಳ್ಳಿ:ಉತ್ತರ ಕರ್ನಾಟಕದ ಹೆಬ್ಬಾಗಿಲೆಂದೇ ಖ್ಯಾತಿ ಪಡೆದ ಹುಬ್ಬಳ್ಳಿಯಲ್ಲಿ ಜನಪ್ರಿಯತೆ ಪಡೆದ ಉಣಕಲ್ ಕೆರೆಗೆ ಒಂದಿಲ್ಲೊಂದು ರೀತಿಯಲ್ಲಿ ಜಲಕಳೆ ಸಮಸ್ಯೆ ತಲೆದೋರಿದೆ. ಈಗ ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಉಣಕಲ್ ಕೆರೆ ಮತ್ತಷ್ಟು ಸ್ಮಾರ್ಟ್ ಆಗಿ ಮಿಂಚಲಿದೆ.
ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಸ್ಮಾರ್ಟ್ ಆಗಲಿದೆ ವಾಣಿಜ್ಯ ನಗರಿಯ ಉಣಕಲ್ ಕೆರೆ - ಉಣಕಲ್ ಕೆರೆ ಸ್ಚಚ್ಚತೆ
ಸುಮಾರು ವರ್ಷಗಳಿಂದ ಸಾಕಷ್ಟು ಅವ್ಯವಸ್ಥೆ ಉಂಟಾಗಿದ್ದ ಕಾರಣ ಉಣಕಲ್ ಕೆರೆ ಜಲಕಳೆಯಿಂದ ತನ್ನ ಸೌಂದರ್ಯವನ್ನು ಕಳೆದುಕೊಂಡಿತ್ತು. ಈಗ ಸ್ಮಾರ್ಟ್ ಸಿಟಿ ಯೋಜನೆಯಿಂದ ಹುಬ್ಬಳ್ಳಿಯ ಈ ಕೆರೆ ಮದುವಣಗಿತ್ತಿಯಂತೆ ಕಂಗೊಳಿಸುವ ಕಾಲ ಸಮೀಪಿಸುತ್ತಿದೆ.
ಈ ಹಿಂದಿನ ದಿನಗಳಲ್ಲಿ ಉಣಕಲ್ ಕೆರೆಯ ಪರಿಸ್ಥಿತಿ ನೋಡಿದ ಅದೆಷ್ಟೋ ಯುವಕರು ಸ್ವಯಂಪ್ರೇರಿತರಾಗಿ ಜಲಕಳೆ ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದರು. ಅಲ್ಲದೇ ಹಲವು ಬಾರಿ ತೆರವು ಕಾರ್ಯಾಚರಣೆಯನ್ನೂ ನಡೆಸಿದ್ದರು. ಆದರೂ ಕೂಡಾ ಜಲಕಳೆಯ ಸಂಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಿಂದಲೇ ಈಗ ಉಣಕಲ್ ಕೆರೆಯ ಸ್ವಚ್ಛತೆ ನಡೆಯುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ಜಲಕಳೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈ ಕೆರೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಕೆಲವೇ ದಿನಗಳಲ್ಲಿ ಉಣಕಲ್ ಕೆರೆ ಸ್ಮಾರ್ಟ್ ಆಗಲಿದೆ ಎಂದು ಹೇಳಿದರು.