ಕರ್ನಾಟಕ

karnataka

ETV Bharat / city

ಯುವಜನತೆ ಮತ್ತು ಮಹಿಳಾ ಉದ್ಯಮಿಗಳಿಗೆ ಉತ್ತೇಜನ: ಫೆ. 1-2ರಂದು ಟೈಕಾನ್​​​-2020 ಶೃಂಗಸಭೆ - ಜಾಗ್ರಾನ್ ಪ್ರಕಾಶನ್ ಲಿಮಿಟೆಡ್ ನ ಅಧ್ಯಕ್ಷ ಅಪೂರ್ವ ಪುರೋಹಿತ

ಯುವಜನತೆ ಮತ್ತು ಮಹಿಳಾ ಉದ್ಯಮಿಗಳ ಉತ್ತೇಜನಕ್ಕೆ ಇಂಡಸ್ ಎಂಟರ್ ಪ್ರೆನರ್ಸ್ ವತಿಯಿಂದ ಫೆ. 1 ಮತ್ತು 2ರಂದು ಟೈಕಾನ್ -2020 ಉದ್ಯಮಶೀಲತಾ ಶೃಂಗಸಭೆ ಆಯೋಜಿಸಲಾಗಿದೆ ಎಂದು ಟೈ ಕನ್ವಿನರ್ ವಿಜೇಶ ಸೈಗಲ್ ಹೇಳಿದರು.

Kn_hbl_03_tiecon_2020_avb_7208089
ಯುವಜನತೆ ಮತ್ತು ಮಹಿಳಾ ಉದ್ಯಮಿಗಳ ಉತ್ತೇಜನ, ಫೆ.1-2 ರಂದು ಟೈಕಾನ್ -2020 ಶೃಂಗಸಭೆ

By

Published : Jan 28, 2020, 1:50 PM IST

ಹುಬ್ಬಳ್ಳಿ:ಯುವಜನತೆ ಮತ್ತು ಮಹಿಳಾ ಉದ್ಯಮಿಗಳ ಉತ್ತೇಜನಕ್ಕೆ ಇಂಡಸ್ ಎಂಟರ್ ಪ್ರೆನರ್ಸ್ ವತಿಯಿಂದ ಫೆ. 1 ಮತ್ತು 2ರಂದು ಟೈಕಾನ್ -2020 ಉದ್ಯಮಶೀಲತಾ ಶೃಂಗಸಭೆ ಆಯೋಜಿಸಲಾಗಿದೆ ಎಂದು ಟೈ ಕನ್ವಿನರ್ ವಿಜೇಶ ಸೈಗಲ್ ಹೇಳಿದರು.

ಯುವಜನತೆ ಮತ್ತು ಮಹಿಳಾ ಉದ್ಯಮಿಗಳಿಗೆ ಉತ್ತೇಜನ: ಫೆ.1-2ರಂದು ಟೈಕಾನ್ -2020 ಶೃಂಗಸಭೆ

ಈಗಾಗಲೇ ಟೈಕಾನ್ ಹುಬ್ಬಳ್ಳಿಯಿಂದ ದೇಶದಾದ್ಯಂತ ಹಲವಾರು ಉದ್ಯಮಶೀಲತೆ ಜಾಗೃತಿ ಕಾರ್ಯಕ್ರಮ ನಡೆಸಿದ್ದು, ಅದರಂತೆ ಯಶಸ್ವಿ ಉದ್ಯಮ, ಉನ್ನತ ವೃತ್ತಿಪರರು, ವೈದ್ಯರು, ಶಿಕ್ಷಣ ತಜ್ಞರು ಹೊಸತನವನ್ನು ಒಗ್ಗೂಡಿಸಿ ಈ ವಿಷಯಗಳ ಬಗ್ಗೆ ಚರ್ಚಿಸಲು ಇಮ್ಯಾಜಿನ್, ಇನ್ನೋವೇಟ್ ಕಾರ್ಯಕ್ರಮಗಳನ್ನು ಟೈಕಾನ್ -2020 ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಎರಡು ದಿನ ನಡೆಯಲಿರುವ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಶ್ರೀನಿವಾಸ ಮಾನೆ, ಗೌರವ ಗುಪ್ತಾ ಉದ್ಘಾಟನೆ ಮಾಡಲಿದ್ದು, ಫೆ. 1ರಂದು ಮಹಿಳಾ ಸಮಾವೇಶ ನಡೆಯಲಿದೆ. ಫೆ. 2ರಂದು ಪತಂಜಲಿ ಸಹ ಸಂಸ್ಥಾಪಕ ಹಾಗೂ ಯೋಗ ಗುರು ಬಾಬಾ ರಾಮದೇವ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು. ಸಮಾವೇಶಕ್ಕೆ ಸುಮಾರು 6000 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಆಸಕ್ತಿ ಹೊಂದಿರುವವರು ವೆಬ್​​ಸೈಟ್ http;//tiecon.tiehubli.org/ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದರು.

ABOUT THE AUTHOR

...view details