ಹುಬ್ಬಳ್ಳಿ: ನಗರದಲ್ಲಿ ಇಂದು ಒಂದೇ ಗಂಟೆಯಲ್ಲಿ ಎರಡು ಕಡೆ ಚಾಕು ಇರಿತ ಪ್ರಕರಣಗಳು ನಡೆದಿವೆ. ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನಿಗೆ ಬ್ಲೇಡ್ನಿಂದ ದಾಳಿ ಮಾಡಿದ್ದರೆ, ಹಣಕಾಸಿನ ವಿಚಾರಕ್ಕೆ ಮತ್ತೋರ್ವನಿಗೆ ಚಾಕುವಿನಿಂದ ಇರಿಯಲಾಗಿದೆ.
ಹೆಗ್ಗೇರಿಯಲ್ಲಿ ಸನ್ಮೂನ್ ಕಬಾಡೆ ಎಂಬಾತನಿಗೆ ಅನಿಲ್ ನಾಯಕ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗ್ತಿದೆ. ಹಣಕಾಸಿನ ವಿಷಯದಲ್ಲಿ ಜಗಳ ತಗೆದು ಸನ್ಮೊನ ಕೈಗೆ ಚಾಕುವಿನಿಂದ ಇರಿದ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಪರಾರಿಯಾದ ಕೆಲವೇ ನಿಮಿಷಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಯಶಸ್ವಿಯಾಗಿದ್ದಾರೆ. ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.