ಹುಬ್ಬಳ್ಳಿ: ಈತ ಇನ್ನೂ ಅಮ್ಮನ ಮಡಿಲಲ್ಲಿ ಆಟವಾಡುವ ಪುಟ್ಟ ಕಂದ. ಆದರೆ, ಇವನ ಜ್ಞಾನ ಶಕ್ತಿ ನೋಡಿದ್ರೆ ನಿಜಕ್ಕೂ ಎಂತವರಿಗೂ ಅಚ್ಚರಿ ಆಗುತ್ತದೆ. ತನ್ನದೇ ಆದ ಅಪಾರ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಾಧನೆ ಮಾಡಿ ತಂದೆ-ತಾಯಿಗೆ ಮಾತ್ರವಲ್ಲದೇ ಇಡೀ ಜಿಲ್ಲೆಗೆ ಹೆಸರು ತಂದಿದ್ದಾನೆ.
ಪಟಾಪಟ್ ಅಂತಾ ಕೇಳಿದ ಪ್ರಶ್ನೆಗೆಲ್ಲ ಉತ್ತರಿಸುವ ತೊದಲು ನುಡಿಯ ಈ ಕಂದನ ಹೆಸರು ಅಥರ್ವ ಎಸ್. ವಾಣಿಜ್ಯನಗರಿ ಹುಬ್ಬಳ್ಳಿಯ ಶಿರೂರ್ ಪಾರ್ಕ್ ನಿವಾಸಿಯಾದ ಪ್ರತಿಭಾ ಹಾಗೂ ಶರಣ್ ಎಂಬ ದಂಪತಿ ಪುತ್ರ. ಅಥರ್ವ್ ತನ್ನ ಅಗಾಧವಾದ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಾಧನೆ ಮಾಡಿದ್ದಾನೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್'ನಲ್ಲಿ ಸಾಧನೆ ಮಾಡಿದ 2 ವರ್ಷದ ಬಾಲಕ ಎರಡು ವರ್ಷದ ಈ ಬಾಲಕ ಜನರಲ್ ನಾಲೆಡ್ಜ್, ಅಂಕಿ-ಸಂಖ್ಯೆಗಳನ್ನು ಎಳ್ಳು ಹುರಿದಂತೆ ಹೇಳುತ್ತಾನೆ. ಅಲ್ಲದೇ ವಿಶ್ವದ ಬಹುತೇಕ ರಾಷ್ಟ್ರದ ನಕ್ಷೆಯನ್ನು ನೋಡುತ್ತಲೇ ದೇಶವನ್ನು ಗುರುತಿಸುತ್ತಾನೆ. 2 ವರ್ಷದಲ್ಲಿಯೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2022ನಲ್ಲಿ ಸಾಧನೆ ಮಾಡಿರುವುದು ಹೆತ್ತವರ ಹರ್ಷವನ್ನು ಇಮ್ಮಡಿಗೊಳಿಸಿದೆ.
ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರು ಎಂಬಂತೆ ಅಮ್ಮನ ಮಡಿಲನ್ನೇ ತನ್ನ ಪಾಠಶಾಲೆಯನ್ನಾಗಿ ಮಾಡಿಕೊಂಡ ಅಥರ್ವ, ಪುಟ್ಟ ವಯಸ್ಸಿನಲ್ಲಿಯೇ ಅರ್ಥಪೂರ್ಣ ಸಾಧನೆ ಮಾಡಿದ್ದಾನೆ. ಈ ಬಾಲಕನ ಸಾಧನೆಗೆ ಪೋಷಕರು ಮಾತ್ರವಲ್ಲದೆ ಹುಬ್ಬಳ್ಳಿಯ ಮಂದಿ ಪ್ರಶಂಸೆ ವ್ಯಕ್ತಪಡಿದ್ದಾರೆ.
ಇದನ್ನೂ ಓದಿ:ಗುಂಡ್ಲುಪೇಟೆ ಬಾಲಕಿಗೆ ಬೇಕಿದೆ ಸಹಾಯಹಸ್ತ: ನೀವು ನೆರವು ನೀಡಿದರೆ ನಿಂತು ಮಾತನಾಡಲಿದ್ದಾಳೆ ಈ ಕಂದಮ್ಮ