ಹುಬ್ಬಳ್ಳಿ: ಅಮ್ಮನ ಕೈ ತುತ್ತು ತಿಂದು ಆಟವಾಡಲು ಹೋಗಿದ್ದ ಎರಡು ವರ್ಷದ ಮಗುವೊಂದು ನಾಲೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಪ್ರಿಯದರ್ಶಿನಿ ಕಾಲೋನಿಯ ಬಳಿ ನಡೆದಿದೆ.
ಹುಬ್ಬಳ್ಳಿಯಲ್ಲಿ ನಾಲೆಗೆ ಬಿದ್ದು ಎರಡು ವರ್ಷದ ಬಾಲಕ ಸಾವು - ಹುಬ್ಬಳ್ಳಿ ಸುದ್ದಿ
ಅಮ್ಮನ ಕೈ ತುತ್ತು ತಿಂದು ಆಟವಾಡಲು ಹೋಗಿದ್ದ ಎರಡು ವರ್ಷದ ಬಾಲಕ ನಾಲೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಪ್ರಿಯದರ್ಶಿನಿ ಕಾಲೋನಿಯ ಬಳಿ ನಡೆದಿದೆ.
ಹುಬ್ಬಳ್ಳಿಯಲ್ಲಿ ನಾಲೆಗೆ ಬಿದ್ದು ಎರಡು ವರ್ಷದ ಬಾಲಕ ಸಾವು
ಶ್ರೀಜಿತ್ ನವಲೇಕರ್ ಮೃತ ಬಾಲಕ. ಬಾಲಕನಿಗೆ ಆತನ ತಾಯಿ ಊಟ ಮಾಡಿಸುತ್ತಿದ್ದರು. ಈ ವೇಳೆ ತಟ್ಟೆಯಲ್ಲಿದ್ದ ಅನ್ನ ಖಾಲಿಯಾಯಿತೆಂದು ಊಟ ತರಲು ಒಳಗೆ ಹೋದ ಸಂದರ್ಭದಲ್ಲಿ ಮಗು ಆಟವಾಡಲು ಹೋಗಿ ನಾಲೆಗೆ ಬಿದ್ದು ಸಾವನ್ನಪ್ಪಿದೆ.
ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.