ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃವಿವಿಯ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಮೃತಳ ತಾಯಿ ನೀಡಿದ ದೂರಿನನ್ವಯ ಕುಲಪತಿಗಳ ಪಿಎ ಎಂ.ಎ.ಮುಲ್ಲಾ ಹಾಗೂ ಉಳವಪ್ಪ ಅವರನ್ನು ಕೃಷಿ ವಿವಿಯ ಆಡಳಿತಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಂಕೋಲಾ ಬಳಿ ಮಾಸ್ತಿಕಟ್ಟಿ ರಸ್ತೆ ಅಪಘಾತದಲ್ಲಿ ಜ.31 ರಂದು ನಡೆದ ರಸ್ತೆ ಅಪಘಾತದಲ್ಲಿ ಕೃವಿವಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಯುವತಿ ಹಾಗೂ ಮತ್ತೊಬ್ಬ ಯುವತಿ ಮೃತಪಟ್ಟಿದ್ದರು.