ಕರ್ನಾಟಕ

karnataka

ETV Bharat / city

ನೈಜ ಪರೀಕ್ಷಾರ್ಥಿಗಳ ಬದಲು ಎಕ್ಸಾಂ ಹಾಲ್​ಗೆ ಬಂದಿದ್ದ ಇಬ್ಬರು ಅಮಾನತು - SSLC exam news

ನೈಜ ವಿದ್ಯಾರ್ಥಿಗಳ ಬದಲಿಗೆ ಪರೀಕ್ಷೆ ಬರೆಯಲು ಬಂದ ಇಬ್ಬರು ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷೆ ನಿರಾಕರಿಸಿ, ಅಮಾನತು ಮಾಡಿರುವ ಪ್ರಕರಣ ಧಾರವಾಡದಲ್ಲಿ ನಡೆದಿದೆ.

Exam
ಪರೀಕ್ಷೆ

By

Published : Jul 1, 2020, 12:03 PM IST

ಧಾರವಾಡ:ನೈಜ ಪರೀಕ್ಷಾರ್ಥಿಗಳ ಬದಲಿಗೆ ಪರೀಕ್ಷೆ ಬರೆಯಲು ಬಂದ ಇಬ್ಬರು ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷೆ ನಿರಾಕರಿಸಿ, ಇಂದಿನ ಪರೀಕ್ಷೆ ಬರೆಯಲು ಬಂದಿದ್ದ ಅವರನ್ನು ಅಮಾನತುಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸೋಮವಾರ ನಡೆದ ಎಸ್ಎಸ್ಎಲ್​ಸಿ ವಿಜ್ಞಾನ ಪರೀಕ್ಷೆಯ ಎಕ್ಸ್‌ಟರ್ನಲ್ ಪತ್ರಿಕೆ ಬರೆಯಲು ಇಬ್ಬರು ಬೇರೆ ಅಭ್ಯರ್ಥಿಗಳು ಆಗಮಿಸಿದ್ದರು. ಪರೀಕ್ಷೆ ಬರೆಯಲು ಬಂದವರು ಹಾಗೂ ಹಾಲ್ ಟಿಕೆಟ್‌ನಲ್ಲಿನ ಫೋಟೋದಲ್ಲಿರುವ ವ್ಯಕ್ತಿಗಳು ಬೇರೆ ಬೇರೆ ಇರುವುದರ ಬಗ್ಗೆ ಮೇಲ್ವಿಚಾರಕರಿಗೆ ಅನುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪರೀಕ್ಷೆ ಬರೆಯಲು ಬಂದವರು ಬೇರೆ ವ್ಯಕ್ತಿಗಳು ಎಂಬ ವಿಚಾರ ಖಚಿತವಾಗಿದೆ.

ಹೀಗಾಗಿ ಸೋಮವಾರ ನಡೆದ ಘಟನೆಯಿಂದಾಗಿ, ಇಂದು ನಡೆದ ಪರೀಕ್ಷೆಗೆ ಆ ಇಬ್ಬರು ವ್ಯಕ್ತಿಗಳಿಗೆ ಅವಕಾಶ ನಿರಾಕರಿಸಲಾಗಿದೆ. ಈ‌ ಕುರಿತು ಇದೀಗ ಇಬ್ಬರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಆದರೆ ನಿಜವಾದ ಪರೀಕ್ಷಾರ್ಥಿಗಳ ಹೆಸರು ತಿಳಿದುಬಂದಿಲ್ಲ.

ABOUT THE AUTHOR

...view details