ಧಾರವಾಡ: ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಎರಡು ಕೊಲೆ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಲಘಟಗಿ-ಹುಬ್ಬಳ್ಳಿ ರಸ್ತೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯರ ಶವ ಪತ್ತೆಯಾಗಿದ್ದವು. ಇದೀಗ ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮೇ 11 ರಂದು ಕಲಘಟಗಿ-ಹುಬ್ಬಳ್ಳಿ ರಸ್ತೆಯ ಎನ್‌ಎಚ್- 63 ರಸ್ತೆ ಕಾಡನಕೊಪ್ಪ ಗ್ರಾಮದ ಹದ್ದಿನಲ್ಲಿ ಹುಬ್ಬಳ್ಳಿ ಈಶ್ವರನಗರದ ಇಂದಿರಾಬಾಯಿ ಪವಾರ್ (75) ಎಂಬ ವೃದ್ಧೆಯ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಕಲಘಟಗಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದಾದ ಬಳಿಕ ಜುಲೈ 2 ರಂದು ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಮತ್ತೋರ್ವ ಮಹಿಳೆಯ ಶವ ಪತ್ತೆಯಾಗಿತ್ತು. ಅದು ಕೂಡ ಅರೆಬೆಂದ ಸ್ಥಿತಿಯಲ್ಲಿ. ಹುಬ್ಬಳ್ಳಿಯ ಈಶ್ವರನಗರದವರೇ ಆದ ಮಹಾದೇವಿ ನೀಲಣ್ಣವರ ಎಂಬುವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಸುಟ್ಟು ಹೋಗಿದ್ದರು. ಈ ಎರಡು ಹತ್ಯೆ ಪ್ರಕರಣಗಳು ಪೊಲೀಸರ ನಿದ್ದೆಗೆಡಿಸಿದ್ದವು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಇದೀಗ ಆರು ಜನರ ಆರೋಪಿಗಳ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡು ತಿಂಗಳು ಈಶ್ವರ ನಗರದಲ್ಲೇ ಠಿಕಾಣಿ..ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಪೊಲೀಸರು ಹುಬ್ಬಳ್ಳಿಯ ಈಶ್ವರನಗರದಲ್ಲೇ ಎರಡು ತಿಂಗಳು ಮನೆ ಮಾಡಿ ಬಿಡಾರ ಹೂಡಿದ್ದರು. ಈಶ್ವರನಗರದ ಜನತೆಯಿಂದ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಅನೇಕ ಸಿಸಿಟಿವಿ ಕ್ಯಾಮರಾ, ಅನುಮಾನಾಸ್ಪದ ವ್ಯಕ್ತಿ ಹಾಗೂ ವಾಹನಗಳ ಓಡಾಟದ ಮೇಲೆ ನಿಗಾ ವಹಿಸಿದ್ದರು. ಸಿಸಿಟಿವಿ ಕ್ಯಾಮರಾದಲ್ಲಿ ಅನುಮಾನಾಸ್ಪದ ವ್ಯಕ್ತಿಯೋರ್ವ ಸೆರೆಯಾಗಿದ್ದನ್ನು ಗಮನಿಸಿದ ಪೊಲೀಸರು, ಆತನನ್ನು ವಿಚಾರಿಸಿದಾಗ ಇಡೀ ದಂಡುಪಾಳ್ಯದಂತಹ ಕಹಾನಿ ಬಯಲಾಗಿತ್ತು.
ಆರೋಪಿಗಳ ಬಂಧನದ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀರು ಕೇಳುವ ನೆಪದಲ್ಲಿ ಬಂದು ಕೃತ್ಯ..ಮೇ 11 ರಂದು ಇಂದಿರಾಬಾಯಿ ಪವಾರ್ ಅವರ ಮನೆಗೆ ನೀರು ಕೇಳುವ ನೆಪದಲ್ಲಿ ಹೋದ ಆರೋಪಿಗಳು ಆ ವೃದ್ಧೆಯನ್ನು ಹತ್ಯೆ ಮಾಡಿ ಅವರ ಮೈಮೇಲಿದ್ದ ಒಡವೆಗಳನ್ನು ದೋಚಿ ನಂತರ ಯಾರಿಗೂ ಗೊತ್ತಾಗದಂತೆ ವೃದ್ಧೆಯನ್ನು ಸುಟ್ಟು ಬಂದಿದ್ದರು. ಇದಾದ ಬಳಿಕ ಜುಲೈ 2 ರಂದು ದನ ಮೇಯಿಸಲೆಂದು ಹೋಗಿದ್ದ ಮಹಾದೇವಿ ನೀಲಣ್ಣವರ ಎಂಬುವರನ್ನು ಹತ್ಯೆ ಮಾಡಿ, ಒಡವೆಗಳನ್ನು ದೋಚಿ ಸುಟ್ಟು ಹಾಕಿದ್ದರು. ಈ ಎಲ್ಲ ಸತ್ಯವನ್ನು ಆ ಆರೋಪಿ ಬಾಯಿ ಬಿಟ್ಟಿದ್ದಲ್ಲದೇ ಹತ್ಯೆಯಲ್ಲಿ ಪಾಲ್ಗೊಂಡ ಇಡೀ ತಂಡದ ಸದಸ್ಯರ ಹೆಸರನ್ನೂ ಹೇಳಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀಮಂತರಾಗಲು ಕೊಲೆ ಮಾಡ್ತಿದ್ದ ಆರೋಪಿಗಳು..ಮೂಲತಃ ಸೊರಬದ ದೇವರಾಜ ಮೊಗಲೆ, ಅದರಗುಂಚಿಯ ಕಾಳಪ್ಪ ರೋಗಣ್ಣವರ, ಅದರಗುಂಚಿಯ ಬಸವರಾಜ ವಾಳದ, ಮೊಹ್ಮದ್‌ರಫೀಕ್ ಬಡಿಗೇರ, ಬೆಳಗಲಿಯ ಶಿವಾನಂದ ಕೆಂಚಣ್ಣವರ ಹಾಗೂ ರೊಟ್ಟಿಗವಾಡದ ಗಂಗಪ್ಪ ಮರತಂಗಿ ಬಂಧಿತ ಆರೋಪಿಗಳು. ಸಣ್ಣ ಪುಟ್ಟ ಕೆಲಸ ಮಾಡಿದ್ರೆ ತಾವು ಶ್ರೀಮಂತರಾಗುವುದಿಲ್ಲ ಎಂದು ಈ ಕೃತ್ಯಕ್ಕೆ ಕೈ ಹಾಕಿದ್ದರು. ಹತ್ಯೆಗೂ ಮುನ್ನ ತಮ್ಮ ಮೊಬೈಲ್‌ಗಳನ್ನು ಒಂದೆಡೆ ಇಟ್ಟು ಹೋಗ್ತಾ ಇದ್ರು. ಅಲ್ಲದೇ, ಹತ್ಯೆ ಮಾಡಿದ ಸ್ಥಳದಲ್ಲಿ ಯಾವುದೇ ಸಾಕ್ಷಿ ಇಡದೇ ಎಲ್ಲವನ್ನೂ ನಾಶ ಮಾಡುತ್ತಿದ್ದರು. ಹತ್ಯೆಗೂ ಮುನ್ನ ಎಲ್ಲರೂ ಸೇರಿ ಮೋಜು-ಮಸ್ತಿ ಮಾಡುತ್ತಿದ್ದ ಬಗ್ಗೆ ಸ್ವತಃ ಆರೋಪಿಗಳೇ ಬಾಯ್ಬಿಟ್ಟಿದ್ದಾರೆ.
ಓಮಿನಿ ಕಾರನ್ನ ಬಾಡಿಗೆ ಪಡೆಯುತ್ತಿದ್ದ ಹಂತಕರು, ಹತ್ಯೆ ಬಳಿಕ ಶವವನ್ನ ರಸ್ತೆಯ ಪಕ್ಕ ಸುಟ್ಟು ಹಾಕಿ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದರು. ತಾವು ಶವವನ್ನ ಸುಡಲು ತಂದ ಪೆಟ್ರೋಲ್ ಡಬ್ಬವನ್ನ ಸಹ ಶವದ ಮೇಲೆ ಹಾಕಿ ತಾವೆಂತಹ ಕ್ರೂರಿಗಳು ಅನ್ನೋದನ್ನ ತೋರಿಸಿದ್ದರು.
ಇದನ್ನೂ ಓದಿ:ಹೊತ್ತಿ ಉರಿವ ಚಿತೆಯಿಂದ ವ್ಯಕ್ತಿಯ ರುಂಡ ತೆಗೆದು ಮನೆಗೆ ಕೊಂಡೊಯ್ದ ಯುವಕ!