ಧಾರವಾಡ: ಜಿಲ್ಲೆಯಲ್ಲಿ ಮತ್ತೆರಡು ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 53 ವರ್ಷದ ಶಿಕ್ಷಕಿಗೆ ಮತ್ತು 14 ವರ್ಷದ ಬಾಲಕಿಗೆ ಒಮಿಕ್ರಾನ್ ಸೋಂಕು ತಗುಲಿದೆ. ಇಬ್ಬರೂ ಕೂಡ ಹುಬ್ಬಳ್ಳಿಯವರು ಎಂದು ಮಾಹಿತಿ ನೀಡಿದ್ದಾರೆ.
ಧಾರವಾಡದಲ್ಲಿ ಮತ್ತೆರಡು ಒಮ್ರಿಕಾನ್ ಸೋಂಕಿತರು ಪತ್ತೆ.. ಹೆಚ್ಚಿದ ಆತಂಕ - ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್
ಧಾರವಾಡ ಜಿಲ್ಲೆಯಲ್ಲಿ 53 ವರ್ಷದ ಶಿಕ್ಷಕಿಗೆ ಮತ್ತು 14 ವರ್ಷದ ಬಾಲಕಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
![ಧಾರವಾಡದಲ್ಲಿ ಮತ್ತೆರಡು ಒಮ್ರಿಕಾನ್ ಸೋಂಕಿತರು ಪತ್ತೆ.. ಹೆಚ್ಚಿದ ಆತಂಕ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್](https://etvbharatimages.akamaized.net/etvbharat/prod-images/768-512-14079914-thumbnail-3x2-lek.jpg)
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್
ಡಿಸೆಂಬರ್ 19 ರಂದು ಮಹಿಳೆಗೆ ಮತ್ತು ಡಿ. 17 ರಂದು ಬಾಲಕಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ನಂತರ ಜಿನೋಮಿಕ್ ಸೀಕ್ವೆನ್ಸಿಂಗ್ ವರದಿಯಲ್ಲಿ ಒಮಿಕ್ರಾನ್ ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದರು.
ಒಮಿಕ್ರಾನ್ ಪ್ರಕರಣಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್
ಇಬ್ಬರು ಸೋಂಕಿತರು ಹೋಂ ಐಸೋಲೇಷನ್ನಲ್ಲಿದ್ದಾರೆ. ಸೋಂಕಿತ ಮಹಿಳೆಗೆ ಎರಡು ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ 395 ಜನರ ವರದಿ ಪಾಸಿಟಿವ್ ಬಂದಿದೆ. ಆದರೂ ಒಮಿಕ್ರಾನ್ ದೃಢಪಟ್ಟ ಹಿನ್ನೆಲೆ ಇನ್ನೊಮ್ಮೆ ಅವರನ್ನು ಟೆಸ್ಟ್ ಮಾಡುತ್ತೇವೆ ಎಂದರು.
Last Updated : Jan 3, 2022, 1:31 PM IST