ಹುಬ್ಬಳ್ಳಿ:ಚಾಲಕನ ನಿಯಂತ್ರಣ ತಪ್ಪಿ ಇಂಡಿಕಾ ಕಾರು ಡಿಕ್ಕಿ ಹೊಡೆದ ಪರಿಣಾಮ ಎರಡು ಹಸುಗಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಂಗೇರಿಯ ಪೋಸ್ಟ್ ಆಫೀಸ್ ಬಳಿ ನಡೆದಿದೆ.
ಹಸುಗಳಿಗೆ ಕಾರು ಡಿಕ್ಕಿ: ಸ್ಥಳದಲ್ಲೇ ಎರಡು ರಾಸುಗಳು ಸಾವು - undefined
ಕುಡಿದ ಮತ್ತಿನಲ್ಲಿ ಕಾರು ಚಾಲನೆ. ನಿಯಂತ್ರಣ ತಪ್ಪಿ ಹಸುಗಳಿಗೆ ಡಿಕ್ಕಿ. ಎರಡು ಹಸುಗಳು ಸ್ಥಳದಲ್ಲೇ ಸಾವು. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಕಾರು ಡಿಕ್ಕಿ ಹೊಡೆದು ಮೃತಪಟ್ಟ ಹಸುಗಳು
ಜೋಳಪ್ಪ ಪೂಜಾರಿ ಎಂಬುವವರಿಗೆ ಸೇರಿದ ಹಸುಗಳು ಇವಾಗಿದ್ದು, ಏಕಾಏಕಿ ಕಾರು ಹಸುಗಳಿಗೆ ಡಿಕ್ಕಿ ಹೊಡೆದು ಮನೆಯ ಗೋಡೆಗೂ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಕಾರು ಚಾಲಕ ಪಾನಮತ್ತನಾಗಿ ಅತೀವೇಗವಾಗಿ ಚಾಲನೆ ಮಾಡಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.
ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.