ಹುಬ್ಬಳ್ಳಿ:ಜಿಲ್ಲೆಯ ಯರಗುಪ್ಪಿ ಗ್ರಾಮದಲ್ಲಿ ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಹೊರ ಜಿಲ್ಲೆಯಿಂದ ಬಂದಂತಹ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಸಹಾಯ ಮಾಡುವ ನೆಪದಲ್ಲಿ ಹುಬ್ಬಳ್ಳಿಯ ಯುವಕರಿಬ್ಬರು ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾರೆ.
ಫೆ.28 ರಂದು ಸಂತ್ರಸ್ತೆಯರು ಹೊರ ಜಿಲ್ಲೆಯಿಂದ ನಾಪತ್ತೆಯಾಗಿ ಹುಬ್ಬಳ್ಳಿಗೆ ಬಂದಿರುತ್ತಾರೆ. ಇವರು ದೇಶಪಾಂಡೆ ನಗರದ ಹತ್ತಿರ ಸುತ್ತಾಡುತ್ತಿದ್ದಾಗ ಅಭಿಷೇಕ್ (27) ಹಾಗೂ ಪ್ರವೀಣ್ (25) ಎಂಬುವರನ್ನು ಪರಿಚಯ ಮಾಡಿಕೊಳ್ಳುತ್ತಾರೆ. ನಂತರ ಸಲುಗೆ ಬೆಳೆಸಿಕೊಂಡು ಬಾಲಕಿಯರನ್ನು ಎರಡು ದಿನಗಳ ಕಾಲ ಗದಗ, ಹಾವೇರಿಯ ಪಾರ್ಕ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸುತ್ತಾಡಿಸಿ ಮೂರನೇ ದಿನ ಅತ್ಯಾಚಾರ ಎಸಗಿದ್ದಾರೆ.