ಹುಬ್ಬಳ್ಳಿ :ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿತರ ಮನೆಯ ಪ್ರದೇಶದಲ್ಲಿ ಸ್ಯಾನಿಟೈಸರ್ ಮಾತ್ರ ಮಾಡಲಾಗಿದೆ. ಆದರೆ, ಮುಂಜಾಗ್ರತಾ ಕ್ರಮವಾಗಿ ಸೀಲ್ಡೌನ್ ಮಾಡಿಲ್ಲ.
ವಾಯವ್ಯ ಸಾರಿಗೆ ಸಂಸ್ಥೆ ನೌಕರನಿಗೆ ಕೊರೊನಾ.. ಸೀಲ್ಡೌನ್ ಆಗದ ವಸತಿ ಪ್ರದೇಶ
ಈ ಹಿಂದೆ ಕೊರೊನಾ ಸೋಂಕಿತರ ಮನೆಯ 100 ಮೀಟರ್ ಪ್ರದೇಶವನ್ನು ಸೀಲ್ಡೌನ್ ಮಾಡಲಾಗುತಿತ್ತು. ಆದರೆ, ಈಗ ಸೀಲ್ಡೌನ್ ಮಾಡದೇ ಇರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ..
ವಾಯುವ್ಯ ಸಾರಿಗೆ ಸಿಬ್ಬಂದಿಗೆ ಕೊರೊನಾ: ಸೀಲ್ಡೌನ್ ಆಗದ ವಸತಿ ಪ್ರದೇಶ
ಹುಬ್ಬಳ್ಳಿಯ ಗೋಕುಲ್ ರಸ್ತೆಯ ವಾಯವ್ಯ ಸಾರಿಗೆ ಸಂಸ್ಥೆಯ ನೌಕರನಿಗೆ ಕೊರೊನಾ ದೃಢವಾಗಿದೆ. ಈತ ವಸತಿ ಗೃಹದಲ್ಲಿ ವಾಸವಿದ್ದರು. ಈ ಹಿಂದೆ ಕೊರೊನಾ ಸೋಂಕಿತರ ಮನೆಯ 100 ಮೀಟರ್ ಪ್ರದೇಶವನ್ನು ಸೀಲ್ಡೌನ್ ಮಾಡಲಾಗುತಿತ್ತು. ಆದರೆ, ಈಗ ಸೀಲ್ಡೌನ್ ಮಾಡದೇ ಇರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ವಸತಿ ಗೃಹಗಳಲ್ಲಿ ವಾಸವಿದ್ದ 60ಕ್ಕೂ ಹೆಚ್ಚು ಚಾಲಕ, ನಿರ್ವಾಹಕರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.