ಕರ್ನಾಟಕ

karnataka

ETV Bharat / city

ವಕೀಲ - ಪೊಲೀಸರ ಮಧ್ಯೆ ಜಟಾಪಟಿ: ಪಿಐ ಸೂರಿನ ವರ್ಗಾವಣೆ - Inspector Prabhu Surina

ನವನಗರದಲ್ಲಿ ವಕೀಲ ಮತ್ತು ಪೊಲೀಸರ ನಡುವಿನ ತಿಕ್ಕಾಟದ ಹಿನ್ನೆಲೆ ಇನ್ಸ್‌ಪೆಕ್ಟರ್ ಪ್ರಭು ಸೂರಿನ ಹಾಗೂ ಓರ್ವ ಸಿಬ್ಬಂದಿ ವರ್ಗಾವಣೆ ಮಾಡಿ ಐಜಿಪಿ ಹಾಗೂ ಪ್ರಭಾರ ಪೊಲೀಸ್ ಆಯುಕ್ತ ರಾಘವೇಂದ್ರ ಸುಹಾಸ್ ಆದೇಶ ಹೊರಡಿಸಿದ್ದಾರೆ.

Prabhu Surina
ಇನ್ಸ್‌ಪೆಕ್ಟರ್ ಪ್ರಭು ಸೂರಿನ

By

Published : Nov 30, 2020, 1:23 PM IST

ಹುಬ್ಬಳ್ಳಿ: ವಕೀಲ ವಿನೋದ್​ ಪಾಟೀಲ ಹಾಗೂ ಪೊಲೀಸರ ನಡುವಿನ ಜಟಾಪಟಿ ವಿಚಾರವಾಗಿ ಇನ್ಸ್‌ಪೆಕ್ಟರ್ ಪ್ರಭು ಸೂರಿನ ಹಾಗೂ ಓರ್ವ ಸಿಬ್ಬಂದಿ ವರ್ಗಾವಣೆ ಮಾಡಿ ಐಜಿಪಿ ಹಾಗೂ ಪ್ರಭಾರ ಪೊಲೀಸ್ ಆಯುಕ್ತ ರಾಘವೇಂದ್ರ ಸುಹಾಸ್ ಆದೇಶ ಹೊರಡಿಸಿದ್ದಾರೆ.

ನವನಗರದಲ್ಲಿ ಬುಧವಾರ ಜಗಳವಾಡುತ್ತಿದ್ದ ವಕೀಲ ಹಾಗೂ ಆತನ ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವಿಚಾರವಾಗಿ ಧಾರವಾಡ ವಕೀಲರ ಸಂಘ ಪ್ರತಿಭಟನೆ ನಡೆಸಿ, ಇನ್ಸ್‌ಪೆಕ್ಟರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿತ್ತು. ಜೊತೆಗೆ ನವನಗರ ಠಾಣೆಯ ಸಿಬ್ಬಂದಿಯನ್ನು ಸಾಮೂಹಿಕ ವರ್ಗಾವಣೆ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದರು.

ಈ ಬೆನ್ನಲ್ಲೇ ಇಂದು ಇನ್ಸ್‌ಪೆಕ್ಟರ್ ವರ್ಗಾವಣೆ ಮಾಡಿ ಪ್ರಭಾರ ಪೊಲೀಸ್ ಆಯುಕ್ತ ರಾಘವೇಂದ್ರ ಸುಹಾಸ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಇನ್ಸ್​ಪೆಕ್ಟರ್, ವಕೀಲರೊಬ್ಬರ ಮಧ್ಯೆ ಜಟಾಪಟಿ: ವಿಡಿಯೋ

ABOUT THE AUTHOR

...view details