ಹುಬ್ಬಳ್ಳಿ: ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಕುಲಕರ್ಣಿ ಮನೆತನದವರಿಂದ ಪ್ರತಿಷ್ಠಾಪಿಸಲಾಗುವ ಗಣೇಶನ ದರ್ಶನಕ್ಕೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದ್ದು, ಗ್ರಾಮಸ್ಥರು ಹಾಗೂ ಕುಲಕರ್ಣಿ ಮನೆತನದವರು ಮಾತ್ರ ದರ್ಶನ ಪಡೆಯುತ್ತಿದ್ದಾರೆ.
ಹುಬ್ಬಳ್ಳಿ: ಇತಿಹಾಸ ಪ್ರಸಿದ್ಧ ಛಬ್ಬಿ ಗಣೇಶನಿಗೆ ಸಾಂಪ್ರದಾಯಿಕ ಪೂಜೆ - Hubli news
ಛಬ್ಬಿ ಗಣೇಶನಿಗೆ ಐತಿಹಾಸಿಕ ಹಿನ್ನೆಲೆ ಇದ್ದು, ಗಣೇಶ ಚತುರ್ಥಿಯಿಂದ ಮೂರು ದಿನಗಳ ಕಾಲ ಕುಲಕರ್ಣಿ ಮನೆತನದವರು ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಿದ್ದರು. ಕೊರೊನಾದಿಂದಾಗಿ ಈ ಬಾರಿ ಗಣೇಶನಿಗೆ ಸರಳ ಹಾಗೂ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗಿದೆ.

ಹುಬ್ಬಳ್ಳಿ: ಇತಿಹಾಸ ಪ್ರಸಿದ್ಧ ಛಬ್ಬಿ ಗಣೇಶನಿಗೆ ಸಾಂಪ್ರದಾಯಿಕ ಪೂಜೆ
ಹುಬ್ಬಳ್ಳಿ: ಇತಿಹಾಸ ಪ್ರಸಿದ್ಧ ಛಬ್ಬಿ ಗಣೇಶನಿಗೆ ಸಾಂಪ್ರದಾಯಿಕ ಪೂಜೆ
ಕುಲಕರ್ಣಿ ಮನೆತನದವರು ಸಾಂಪ್ರದಾಯಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪೂಜೆ-ಪುನಸ್ಕಾರ ನಡೆಸಲು ಅವಕಾಶ ನೀಡಿದ್ದಾರೆ. ಆರೋಗ್ಯದ ಹಿತದೃಷ್ಟಿಯಿಂದ ಹೊರ ಜಿಲ್ಲೆ ಹಾಗೂ ರಾಜ್ಯದ ಭಕ್ತಾಧಿಗಳಿಗೆ ನಿಷೇಧ ಹೇರಲಾಗಿದೆ.
ಹೀಗಾಗಿ ಛಬ್ಬಿ ಗಣೇಶನಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಕೊರೊನಾದಿಂದ ಮುಕ್ತಿ ನೀಡುವಂತೆ ಬೇಡಿಕೊಂಡಿರುವುದಾಗಿ ಕುಲಕರ್ಣಿ ಕುಟುಂಬಸ್ಥರು ತಿಳಿಸಿದ್ದಾರೆ.