ಕರ್ನಾಟಕ

karnataka

ETV Bharat / city

ಹುಬ್ಬಳ್ಳಿಯ ಗ್ಲಾಸ್ ಹೌಸ್​ನಲ್ಲಿ ಶೀಘ್ರದಲ್ಲೇ ಟಾಯ್ ಬುಲೆಟ್ ರೈಲು: ಅಂತಿಮ ಹಂತಕ್ಕೆ ಕಾಮಗಾರಿ - Toy bullet train

ಹುಬ್ಬಳ್ಳಿಯ ಗ್ಲಾಸ್ ಹೌಸ್​ನಲ್ಲಿರುವ ಮಹಾತ್ಮಾಗಾಂಧಿ‌ ಪಾರ್ಕ್​ನಲ್ಲಿ ಚಿಕ್ಕ ಮಕ್ಕಳಿಗಾಗಿ ಬುಲೆಟ್ ರೈಲು ವಿನ್ಯಾಸದ ಟಾಯ್ ರೈಲು ವ್ಯವಸ್ಥೆ ಮಾಡಲಾಗುತ್ತಿದೆ.

Toy bullet train
ಟಾಯ್ ಬುಲೆಟ್ ರೈಲು

By

Published : Feb 8, 2022, 3:27 PM IST

ಹುಬ್ಬಳ್ಳಿ: ಹುಬ್ಬಳ್ಳಿಯ ಗ್ಲಾಸ್ ಹೌಸ್​ನಲ್ಲಿರುವ ಮಹಾತ್ಮಾಗಾಂಧಿ‌ ಪಾರ್ಕ್​ನಲ್ಲಿ ಶೀಘ್ರದಲ್ಲೇ ಟಾಯ್ ರೈಲು ಬರಲಿದ್ದು, ಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಚಿಕ್ಕ ಮಕ್ಕಳಿಗಾಗಿ 950 ಮೀಟರ್ ನಷ್ಟು ದೂರ ಸಂಚರಿಸುವ ಟಾಯ್ ರೈಲು ವ್ಯವಸ್ಥೆ ಮಾಡಲಾಗುತ್ತಿದ್ದು, ಮಕ್ಕಳಿಗೆ ಮನರಂಜನೆ ನೀಡಲಿದೆ. ಬುಲೆಟ್ ರೈಲು ವಿನ್ಯಾಸದ ಟಾಯ್ ರೈಲು ಉತ್ತರ ಕರ್ನಾಟಕದಲ್ಲೇ ಪ್ರಥಮವಾಗಿದೆ.

ಕಾಮಗಾರಿ ಅಂತಿಮ ಹಂತಕ್ಕೆ

ಇದನ್ನೂ ಓದಿ: ಮೈಸೂರಿನಲ್ಲಿ ರಾತ್ರೋರಾತ್ರಿ ಶತಮಾನದ ಶಾಲೆ ನೆಲಸಮ

ಇನ್ನೆರೆಡು ವಾರದಲ್ಲಿ ಕಾಮಗಾರಿ ‌ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ನಂತರ ರೈಲು ಅಧಿಕಾರಿಗಳು ‌ಪರಿಶೀಲನೆ ನಡೆಸಿ‌ ಅನುಮತಿ ‌ನೀಡಿದ ನಂತರ ಟಾಯ್ ಬುಲೆಟ್ ರೈಲು ಗಟೆಗೆ 15 ರಿಂದ 20 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ.

ABOUT THE AUTHOR

...view details