ಕರ್ನಾಟಕ

karnataka

ETV Bharat / city

ಚಿಗರಿ ಬಸ್ ನಿಲ್ದಾಣದಲ್ಲೇ ಎಂಟ್ರಿ ಕೊಟ್ಟ ಟೋಯಿಂಗ್ ವಾಹನ: ವಿಡಿಯೋ ವೈರಲ್​ - ಚಿಗರಿ ಬಸ್ ನಿಲ್ದಾಣದಲ್ಲೇ ಎಂಟ್ರಿ ಕೊಟ್ಟ ಟೋಯಿಂಗ್ ವಾಹನ

ಬಿ.ಆರ್.ಟಿ.ಎಸ್. ರಸ್ತೆಯಲ್ಲಿ ಓಡಾಡುವ ಖಾಸಗಿ ವಾಹನ ಸವಾರರನ್ನು ಹಿಡಿದು ಬಿಸಿ ಮುಟ್ಟಿಸಿದ್ದ ಪೊಲೀಸರೇ ಇಂದು ಟೋಯಿಂಗ್ ವಾಹನದಲ್ಲಿ ರಾಜಾರೋಷವಾಗಿ ಚಲಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

video viral
ಟೋಯಿಂಗ್ ವಾಹನ

By

Published : Feb 8, 2020, 10:27 PM IST

ಹುಬ್ಬಳ್ಳಿ: ಬಿ.ಆರ್.ಟಿ.ಎಸ್ ರಸ್ತೆಯಲ್ಲಿ ಓಡಾಡುವ ಖಾಸಗಿ ವಾಹನ ಸವಾರರನ್ನು ಹಿಡಿದು ಬಿಸಿ ಮುಟ್ಟಿಸಿದ್ದ ಪೊಲೀಸರೇ ಇಂದು ಟೋಯಿಂಗ್ ವಾಹನದಲ್ಲಿ ರಾಜಾರೋಷವಾಗಿ ಚಲಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಹುಬ್ಬಳ್ಳಿ ಟೋಯಿಂಗ್ ವಾಹನ ವಿಡಿಯೋ ವೈರಲ್​

ಹುಬ್ಬಳ್ಳಿಯ ಬಸ್ ನಿಲ್ದಾಣ ಉದ್ಘಾಟನೆಗೊಂಡ ನಂತರ ರೂಲ್ಸ್ ಬ್ರೇಕ್ ಮಾಡಿ ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ವಾಹನಗಳನ್ನ ಎತ್ತಿಕೊಂಡು ಹೋಗುವ ಟ್ರಾಫಿಕ್ ಟೋಯಿಂಗ್ ವಾಹನ, ಯಾವುದೇ ತುರ್ತು ಪರಿಸ್ಥಿತಿ ಇಲ್ಲದಿದ್ದರೂ ಹೊಸೂರಿನಿಂದ ಜೆ.ಜಿ.ಕಾಮರ್ಸ್ ಕಾಲೇಜಿನವರೆಗೂ ಚಿಗರಿ ಬಸ್​ ಮುಂದೆಯೇ ಸಂಚರಿಸಿದೆ. ಇದನ್ನು ಕಂಡ ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

For All Latest Updates

ABOUT THE AUTHOR

...view details