ಕರ್ನಾಟಕ

karnataka

ETV Bharat / city

ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಪೋಲಿಸ್​ ಪೇದೆ ಸಾವು - ಪೋಲಿಸ್​ ಪೇದೆ ಸಾವು

ಕರ್ತವ್ಯ ಮುಗಿಸಿ ಪೊಲೀಸ್​ ಪೇದೆ ವಾಪಸ್ಸಾಗುತ್ತಿದ್ದಾಗ ಬೈಕ್​ಗೆ ಟಿಪ್ಪರ್​ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪೇದೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಪೋಲಿಸ್​ ಪೇದೆ ಸಾವು

By

Published : Mar 10, 2019, 3:25 PM IST

ಹುಬ್ಬಳ್ಳಿ: ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಪೇದೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗದಗ ರಸ್ತೆಯ ಕುಸುಗಲ್ ಕ್ರಾಸ್ ಬಳಿ ನಡೆದಿದೆ‌. ಗುರುಸಿದ್ದಪ್ಪ ಬಿ. ಶಿರೂರ(52) ಸಾವನಪ್ಪಿದ ಪೊಲೀಸ್​ ಪೇದೆ.

ಬಂಡಿವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ಗುರುಸಿದ್ದಪ್ಪ ಕರ್ತವ್ಯ ಮುಗಿಸಿ ಕುಸುಗಲ್ ಗ್ರಾಮಕ್ಕೆ ಆಗಮಿಸುತ್ತಿದ್ದಾಗ ಬೈಕ್​ಗೆ ಟಿಪ್ಪರ್​ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಪೇದೆ ಗುರು ಸಿದ್ದಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details