ಹುಬ್ಬಳ್ಳಿ:ಕಲಘಟಗಿ ಪೊಲೀಸರಿಗೂ ಕೊರೊನಾ ಭೀತಿ ಶುರುವಾಗಿದ್ದು, ಠಾಣೆಯ ಮೂವರು ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ.
ಕೊರೊನಾ ಸೋಂಕಿತನ ಸಂಪರ್ಕ: ಕಲಘಟಗಿ ಠಾಣೆಯ ಮೂವರು ಸಿಬ್ಬಂದಿ ಕ್ವಾರಂಟೈನ್ - ಹುಬ್ಬಳ್ಳಿಯ ಕಲಘಟಗಿ ಪೊಲೀಸ್ ಠಾಣೆ
ರೋಗಿ ನಂಬರ್-3397ರ ಸಂಪರ್ಕದಲ್ಲಿದ್ದ ಕಲಘಟಗಿ ಠಾಣೆಯ ಮೂವರು ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಿ, ಅವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.
![ಕೊರೊನಾ ಸೋಂಕಿತನ ಸಂಪರ್ಕ: ಕಲಘಟಗಿ ಠಾಣೆಯ ಮೂವರು ಸಿಬ್ಬಂದಿ ಕ್ವಾರಂಟೈನ್ three staff at Kalaghatagi Station were Quarantine](https://etvbharatimages.akamaized.net/etvbharat/prod-images/768-512-7458893-742-7458893-1591179310417.jpg)
ಪಿ-3397ಗೆ ಜೂನ್ 1ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಮೇ 19ರಂದು ದುಮ್ಮವಾಡ ಗ್ರಾಮದಲ್ಲಿ ನಡೆದಿದ್ದ ಅವಘಡ ಸಂಬಂಧ ಸ್ಥಳ ಮಹಜರಿಗೆ ಹೋಗಿದ್ದ ಪೊಲೀಸರೊಂದಿಗೆ ಪಿ-3397 ಪಂಚನಾಮೆ ನೆರವೇರಿಸಿದ್ದ. ಇದಾದ ಬಳಿಕ ಮೇ 20ರಂದು ಠಾಣೆಗೆ ತೆರಳಿದ್ದ. ಬಳಿಕ 22ರಂದು ಅಸ್ವಸ್ಥನಾದ ಈತ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ತೆರಳಿದ್ದ.
ನಂತರ ಎಸ್ಡಿಎಂ ಆಸ್ಪತ್ರೆಗೆ ಬಂದ ಈತನ ಗಂಟಲು ದ್ರವ ಪರೀಕ್ಷೆ ಮಾಡಿದ್ದು, ಜೂನ್ 1ರಂದು ಬಂದ ವರದಿಯಲ್ಲಿ ಆತನಿಗೆ ಸೋಂಕು ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಆತನೊಂದಿಗೆ ಸಂಪರ್ಕದಲ್ಲಿದ್ದ ಮೂವರು ಪೊಲೀಸ್ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಿ, ಮೂವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.