ಬೆಂಗಳೂರು/ಹುಬ್ಬಳ್ಳಿ: ಮೂವರು ಐಪಿಎಸ್ ಅಧಿಕಾರಿಗಳನ್ನು ಧಿಡೀರ್ ವರ್ಗಾವಣೆಗೊಳಿಸಿ(three IPS officers transferred) ರಾಜ್ಯ ಸರ್ಕಾರ ಆದೇಶ(state government order) ಹೊರಡಿಸಿದೆ.
ಡಿಸಿಪಿ ಕೆ. ರಾಮರಾಜನ್ ಅವರನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ವಿಭಾಗದಿಂದ ಬೆಂಗಳೂರು ನಗರದ ಕಮಾಂಡ್ ಸೆಂಟರ್ಗೆ, ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾರನ್ನು ಭದ್ರಾವತಿ ಉಪ ವಿಭಾಗದಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ವಿಭಾಗದ ಡಿ.ಸಿ.ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಮತ್ತು ಸಾಹಿಲ್ ಬಾಗ್ಲಾರಿಗೆ ಸಿ.ಐ.ಡಿ ಉಪ ಪೊಲೀಸ್ ಆಯುಕ್ತರಾಗಿ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ. ಐ.ಪಿ.ಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಮ್ ಅವರನ್ನು ಭದ್ರಾವತಿ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.