ಧಾರವಾಡ:ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಲಾಯಿತು. ಈ ಬಗ್ಗೆ ಸಿಎಂಗೆ ಮಾಹಿತಿ ನೀಡಲಾಗಿದೆ. ಜಿಲ್ಲೆಯಲ್ಲಿ ಡಿಸಿ ನೇತೃತ್ವದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ ಬಾರಿ ಕೊರೊನಾ ಬಗ್ಗೆ ಅರಿವು ಇರಲಿಲ್ಲ. ಈ ಬಾರಿ ಚೆನ್ನಾಗಿ ಕೆಲಸ ನಡೆದಿದೆ. ಇಷ್ಟು ಬೇಗ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತೆ ಅಂತಾ ಗೊತ್ತಿರಲಿಲ್ಲ. ಇದೀಗ ಜನರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಕನಿಷ್ಠ ಮೂರು ವಾರಗಳ ಕರ್ಫ್ಯೂ ಅವಶ್ಯಕ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಜಿಲ್ಲೆಯಲ್ಲಿ ಎಲ್ಲವೂ ಸರಿಯಾಗಿದೆ. 3,489 ಆ್ಯಕ್ಟಿವ್ ಕೇಸ್ ಗಳಿದ್ದು, 2,486 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ. ನಿತ್ಯವೂ 3700 ಟೆಸ್ಟಿಂಗ್ ನಡೆದಿದೆ.1212 ಸೋಂಕಿತರು ಅಡ್ಮಿಟ್ ಆಗಿದ್ದಾರೆ. ಇದರಲ್ಲಿ 228 ಜನ ಬೇರೆ ಜಿಲ್ಲೆಯವರು 2000 ಕ್ಕೂ ಹೆಚ್ಚು ಬೆಡ್ ಇವೆ, ಇನ್ನೂ 1074 ಬೆಡ್ ಖಾಲಿ ಇವೆ ಎಂದರು.
ಆಕ್ಸಿಜನ್ ಬೆಡ್ 397, ಐಸಿಯು ಬೆಡ್ 80 104 ವೆಂಟಿಲೇಟರ್ಸ್ ಲಭ್ಯ ಜಿಲ್ಲೆಯಲ್ಲಿ ಶೇ. 11 ಪಾಸಿಟಿವಿಟಿ ರೇಟ್ ಇದೆ. ನಿನ್ನೆಯಷ್ಟೇ ಶೇ. 15 ರಷ್ಟು ರೇಟ್ ಬಂದಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆಯೇ ಇಲ್ಲ, ಕಿಮ್ಸ್‌ನಲ್ಲಿ 42 ಕೆ.ಎಲ್. ಸಾಮರ್ಥ್ಯದ ಆಕ್ಸಿಜನ್ ಸಂಗ್ರಹಗಾರವಿದೆ ಎಂದು ಸಚಿವರು ತಿಳಿಸಿದರು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ಜಿಲ್ಲಾಸ್ಪತ್ರೆಯಲ್ಲಿ 6 ಕೆ.ಎಲ್. ಸಂಗ್ರಹಾಗಾರವಿದೆ ಎಲ್ಲಿಯೂ ಆಮ್ಲಜನಕದ ಸಮಸ್ಯೆಯಿಲ್ಲ, ಜಿಲ್ಲೆಯಲ್ಲಿ 740 ರೆಮ್‌ಡಿಸಿವಿರ್ ಔಷಧಿ ಇದೆ. ಬೇರೆ ಜಿಲ್ಲೆಯಿಂದ ಬಂದವರಿಗೆ ಟೆಸ್ಟಿಂಗ್ ಆಗಿದೆ. ಒಂದೆರಡು ದಿನಗಳಲ್ಲಿ ರಿಪೋರ್ಟ್ ಬರುತ್ತೆ, ಯಾವುದೇ ಸಮಸ್ಯೆ ಇಲ್ಲ. ಕಿಮ್ಸ್‌ನಲ್ಲಿ ಮೇಕ್ ಶಿಫ್ಟ್ ವಾರ್ಡ್ ಮಾಡಲಾಗುತ್ತಿದೆ. 66 ಬೆಡ್ ಗಳ ಮೇಕ್ ಶಿಫ್ಟ್ ವಾರ್ಡ್ ಮಾಡಲು ಸೂಚಿಸಲಾಗಿದೆ ಎಂದು ಶೆಟ್ಟರ್ ಮಾಹಿತಿ ನೀಡಿದರು.