ಧಾರವಾಡ: ನಕಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸುಮಾರು ಒಂದು ಲಕ್ಷ ಮೌಲ್ಯದ ಬಾಳಿಗಿಡಗಳನ್ನು ಕಡಿದು ಹೊತ್ತೊಯ್ದ ಘಟನೆ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ನಡೆದಿದೆ.
ಲಕ್ಷಾಂತರ ರೂ. ಮೌಲ್ಯದ ಬಾಳಿಗಿಡ ಕದ್ದೊಯ್ದ ನಕಲಿ ಅಯ್ಯಪ್ಪ ಮಾಲಾಧಾರಿಗಳು - Dharwad Fake Ayyappaswamy Maladari Theft banana tree news
ಧಾರವಾಡ ತಾಲೂಕಲ್ಲಿ ರಾಯಪ್ಪ ಮಲ್ಲಪ್ಪ ಸುಳ್ಳದ ಎಂಬುವರ ತೋಟದಲ್ಲಿ ಬೆಳೆದಿದ್ದ ಸುಮಾರು 210 ಬಾಳಿಗಿಡ ಮತ್ತು ಬಾಳೆಗೊನೆಯನ್ನು ನಕಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಕದ್ದೊಯ್ದಿದ್ದಾರೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ರೈತ ದಿಕ್ಕು ತೋಚದಂತಾಗಿದ್ದಾನೆ.
![ಲಕ್ಷಾಂತರ ರೂ. ಮೌಲ್ಯದ ಬಾಳಿಗಿಡ ಕದ್ದೊಯ್ದ ನಕಲಿ ಅಯ್ಯಪ್ಪ ಮಾಲಾಧಾರಿಗಳು theft-of-dharwad-fake-ayyappaswamy-maladari](https://etvbharatimages.akamaized.net/etvbharat/prod-images/768-512-5390766-thumbnail-3x2-banana.jpg)
ಬಾಳಿಗಿಡ ಕದ್ದೋಯ್ದ ನಕಲಿ ಅಯ್ಯಪ್ಪ ಮಾಲಾಧಾರಿಗಳು
ರಾಯಪ್ಪ ಮಲ್ಲಪ್ಪ ಸುಳ್ಳದ ಎಂಬುವರ ತೋಟದಲ್ಲಿ ಬೆಳೆದಿದ್ದ ಸುಮಾರು 210 ಬಾಳಿಗಿಡ ಮತ್ತು ಬಾಳೆಗೊನೆಗಳನ್ನು ಬೆಳಗ್ಗೆ 10:30ರ ಸುಮಾರಿಗೆ ನಕಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಕಡಿದು ವಾಹನದಲ್ಲಿ ಕದ್ದೊಯ್ದಿದ್ದಾರೆ ಎಂದು ರೈತ ಆರೋಪಿಸಿದ್ದಾನೆ.
ಬಾಳಿಗಿಡ ಕದ್ದೊಯ್ದ ನಕಲಿ ಅಯ್ಯಪ್ಪ ಮಾಲಾಧಾರಿಗಳು
ಪ್ರಕರಣ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲು ರೈತ ರಾಯಪ್ಪ ಮುಂದಾಗಿದ್ದಾನೆ. ಕದ್ದವರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾನೆ.