ಕರ್ನಾಟಕ

karnataka

ETV Bharat / city

ಡೋರ್​ ಲಾಕ್​ ಮುರಿದು ಕಳ್ಳತನ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು - Hubli Theft news

ಯಾರೂ ಮನೆಯಲ್ಲಿಲ್ಲದ ವೇಳೆ ಮನೆಯ ಡೋರ್​ ಲಾಕ್ ಮುರಿದು ಲಕ್ಷಾಂತರ ರೂಪಾಯಿ‌ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.‌ ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Theft in Hubli
ಕಳ್ಳತನ

By

Published : Mar 2, 2020, 9:28 AM IST

ಹುಬ್ಬಳ್ಳಿ:ಬೀಗ ಹಾಕಿದ ಮನೆಯ ಡೋರ್​ ಲಾಕ್ ಮುರಿದು ಲಕ್ಷಾಂತರ ರೂಪಾಯಿ‌ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಕೇಶ್ವಾಪುರದ ಮಥುರಾ ಎಸ್ಟೇಟ್​ನಲ್ಲಿ ನಡೆದಿದೆ.‌

ಫೆ. 27 ರಂದು ಸುನೀತಾ ರಾಮಚಂದ್ರ ನಾಯ್ಕ ಎಂಬುವವರು ಮನೆಗೆ ಬೀಗ ಹಾಕಿ ತವರು ಮನೆಗೆ ಹೋಗಿದ್ದರು. ಆ ಸಂದರ್ಭ ಮನೆಯ ಇಂಟರ್​ ಲಾಕ್ ಮುರಿದು ಒಳ ಪ್ರವೇಶಿಸಿದ ಕಳ್ಳರು, ಬೆಡ್​ ರೂಮಿನ ತಿಜೋರಿ ಒಳಗಿದ್ದ 30 ಸಾವಿರ ರೂ. ನಗದು, 2 ಬಂಗಾರದ ಬಳೆ, ನೆಕ್ಲೆಸ್ ಸೇರಿದಂತೆ ಒಟ್ಟು 2.40 ಲಕ್ಷ ‌ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ‌ ಮಾಡಿ ಪರಾರಿಯಾಗಿದ್ದಾರೆ.

ಕಳ್ಳತನ

ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details