ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ: ಐಡಿಬಿಐ ಬ್ಯಾಂಕ್‌​​​ನಲ್ಲಿ ಕಳ್ಳತನಕ್ಕೆ ಯತ್ನ - hubli

ಹುಬ್ಬಳ್ಳಿ ನಗರದ ಗೋಕುಲ ರೋಡ್ ಗಣಪತಿ ಪ್ಲಾಜಾದ ನೆಲಮಹಡಿಯಲ್ಲಿರುವ ಐಡಿಬಿಐ ಬ್ಯಾಂಕ್​​ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.

hubli
ಹುಬ್ಬಳ್ಳಿ

By

Published : Oct 29, 2021, 1:41 PM IST

ಹುಬ್ಬಳ್ಳಿ: ಗೋಕುಲ ರೋಡ್ ಗಣಪತಿ ಪ್ಲಾಜಾದ ನೆಲಮಹಡಿಯಲ್ಲಿರುವ ಐಡಿಬಿಐ ಬ್ಯಾಂಕ್​​ನ ಕಿಟಕಿಯ ಸರಳು ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ಇಂದು ನಸುಕಿನ ಜಾವ ನಡೆದಿದೆ.

ವ್ಯಕ್ತಿಯೊಬ್ಬ ಹೆಕ್ಸಾ ಬ್ಲಡ್ ಮತ್ತು ಸುತ್ತಿಗೆ ಬಳಸಿ ಕಬ್ಬಿಣದ ಸರಳುಗಳನ್ನು ಕತ್ತರಿಸಿ ಒಳಗೆ ನುಗ್ಗಿದ್ದ. ಬಳಿಕ ಸಿಸಿಟಿವಿ ಕ್ಯಾಮರಾದ ಪವರ್ ಸಪ್ಲೈ ಕೇಬಲ್ ಹಾಗು ಸೆಕ್ಯುರಿಟಿ ಅಲಾರಾಂನ ವೈರ್ ಕತ್ತರಿಸಿದ್ದ. ನಂತರ ಕಳ್ಳತನದ ಯತ್ನ ವಿಫಲವಾಗಿದ್ದರಿಂದ ಕಳ್ಳತನಕ್ಕಾಗಿ ತಂದಿದ್ದ ವಸ್ತುಗಳನ್ನು ಅಲ್ಲೇ ಎಸೆದು ಪರಾರಿಯಾಗಿದ್ದಾನೆ ಎನ್ನಲಾಗ್ತಿದೆ.

ಈ ವೇಳೆ ಸುಮಾರು 5 ಸಾವಿರ ರೂ.ನಷ್ಟು ಹಾನಿಯಾಗಿದೆ. ಈ ಕುರಿತು ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಸುನೀಲ ಶಿರಾಲ್ಕರ್‌ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ.

ABOUT THE AUTHOR

...view details