ಹುಬ್ಬಳ್ಳಿ: ಕಳ್ಳತನ ಆರೋಪದ ಮೇಲೆ ಬಂಧಿಸಲ್ಪಿಟ್ಟಿದ್ದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದ್ದು, ಹುಬ್ಬಳ್ಳಿ ಉಪನಗರ ಠಾಣಾ ಪೊಲೀಸರಲ್ಲಿ ಆತಂಕ ಶುರುವಾಗಿದೆ.
ಕಳ್ಳತನ ಆರೋಪಿಗೆ ಕೊರೊನಾ: ಪೊಲೀಸರಿಗೆ ಆತಂಕ - Hubli police station
ಕಳ್ಳತನ ಆರೋಪದ ಮೇಲೆ ಬಂಧಿಸಲ್ಪಿಟ್ಟಿದ್ದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಕಳೆದ ಎರಡು-ಮೂರು ದಿನಗಳಿಂದ ಆತನ ಜೊತೆ ಹಲವಾರು ಪೊಲೀಸರು ಸಂಪರ್ಕ ಹೊಂದಿದ್ದು, ಈಗ ಅವರಲ್ಲಿ ಭೀತಿ ಶುರುವಾಗಿದೆ.
![ಕಳ್ಳತನ ಆರೋಪಿಗೆ ಕೊರೊನಾ: ಪೊಲೀಸರಿಗೆ ಆತಂಕ Theft accused infected with covid](https://etvbharatimages.akamaized.net/etvbharat/prod-images/768-512-7830484-thumbnail-3x2-megha.jpg)
ಕಳ್ಳತನ ಆರೋಪಿಗೆ ಕೊರೊನಾ ದೃಢ
ಜೂನ್ 27ರಂದು ನಗರದ ಹಾರ್ಡ್ವೇರ್ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಇಂದು ಆತನಿಗೆ ಕೊರೊನಾ ದೃಢಪಟ್ಟಿದೆ.
ಈತನನ್ನು ಬಂಧಿಸಿದ ಬಳಿಕ ಕೋವಿಡ್ ಟೆಸ್ಟ್ ಮಾಡದೆ ಕೊಠಡಿಯೊಂದರಲ್ಲಿ ಇರಿಸಲಾಗಿತ್ತು. ಅದೇ ಕೊಠಡಿಯಲ್ಲಿ ಇನ್ನೊಬ್ಬ ಕೂಡ ಇದ್ದ. ಅಲ್ಲದೆ ಕಳೆದ ಎರಡು-ಮೂರು ದಿನಗಳಿಂದ ಆತನ ಜೊತೆ ಹಲವಾರು ಪೊಲೀಸರು ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.