ಹುಬ್ಬಳ್ಳಿ:ಪರೀಕ್ಷಾ ಆಯೋಜಕರ ಯಡವಟ್ಟಿನಿಂದ ಎಲ್‌ಐಸಿ ಅಸಿಸ್ಟೆಂಟ್ ಪರೀಕ್ಷೆಯಿಂದ 32 ಅಭ್ಯರ್ಥಿಗಳು ವಂಚಿತರಾಗಿರುವ ಘಟನೆ ಇಲ್ಲಿನ ಅಕ್ಷಯ ಕಾಲೋನಿಯ ಐಬಿಎಂಆರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಎಲ್‌ಐಸಿ ಅಸಿಸ್ಟೆಂಟ್ ಪರೀಕ್ಷೆ ವೇಳೆ ಆಯೋಜಕರ ಯಡವಟ್ಟು: 32 ಅಭ್ಯರ್ಥಿಗಳು ಹೊರಕ್ಕೆ - ಐಬಿಪಿಎಸ್ ಮಂಡಳಿಗೆ ಮನವಿ
ಪರೀಕ್ಷಾ ಆಯೋಜಕರ ಯಡವಟ್ಟಿನಿಂದ ಎಲ್‌ಐಸಿ ಅಸಿಸ್ಟೆಂಟ್ ಪರೀಕ್ಷೆಯಿಂದ 32 ಅಭ್ಯರ್ಥಿಗಳು ವಂಚಿತರಾಗಿರುವ ಘಟನೆ ಇಲ್ಲಿನ ಅಕ್ಷಯ ಕಾಲೋನಿಯ ಐಬಿಎಂಆರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
![ಎಲ್‌ಐಸಿ ಅಸಿಸ್ಟೆಂಟ್ ಪರೀಕ್ಷೆ ವೇಳೆ ಆಯೋಜಕರ ಯಡವಟ್ಟು: 32 ಅಭ್ಯರ್ಥಿಗಳು ಹೊರಕ್ಕೆ](https://etvbharatimages.akamaized.net/etvbharat/prod-images/768-512-4910472-thumbnail-3x2-sow.jpg)
200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಳ್ಳಾರಿ, ಕಾರವಾರ, ಬೆಳಗಾವಿ, ಗದಗ, ಕೊಪ್ಪಳ, ವಿಯಪುರ ಸೇರಿದಂತೆ ಹಲವು ಕಡೆಗಳಿಂದ ಆಗಮಿಸಿದ್ದರು. ಬೆಳಗ್ಗೆ 9.15ಕ್ಕೆ ಆನ್‌ಲೈನ್ ಪರೀಕ್ಷೆ ವೇಳೆ ಕೊನೆ ಕ್ಷಣದಲ್ಲಿ ಪ್ರವೇಶ ಪತ್ರದ ಜೆರಾಕ್ಸ್ ತರುವಂತೆ ಆಯೋಜಕರು ಸೂಚಿಸಿದರು. ಹೀಗಾಗಿ ಜೆರಾಕ್ಸ್ ತರಲು ಹೋಗಿದ್ದ 32 ಅಭ್ಯರ್ಥಿಗಳು ತಡವಾಗಿ ಬಂದ ಕಾರಣ ಆಯೋಜಕರು ಪ್ರವೇಶ ನಿರಾಕರಿಸಿದ್ದಾರೆ.
ಇನ್ನು ಕೆಲ ಮಹಿಳಾ ಅಭ್ಯರ್ಥಿಗಳು ಮದುವೆಯಾಗಿದ್ದರಿಂದ ಅವರ ಹೆಸರು ಮತ್ತು ವಿಳಾಸ ಬದಲಾವಣೆಯಿಂದ ಅವರಿಗೂ ಪರೀಕ್ಷೆಗೆ ಕುಳಿತುಕೊಳ್ಳಲು ನಿರಾಕರಿಸಲಾಗಿದೆ. ಇದರಿಂದ ಮತ್ತೆ ಪರೀಕ್ಷೆ ನಡೆಸುವಂತೆ ಕೋರಿ ಅನ್ಯಾಯಕೊಳ್ಳಗಾದ ಅಭ್ಯರ್ಥಿಗಳು ಐಬಿಪಿಎಸ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.