ಹುಬ್ಬಳ್ಳಿ :ಕಾಶ್ಮೀರಿ ಫೈಲ್ಸ್ ಸಿನಿಮಾ ಸಮಾಜದಲ್ಲಿ ಕೋಮು ಭಾವನೆ ಹುಟ್ಟು ಹಾಕಲು ಕಾರಣವಾಗುತ್ತಿದೆ. ಕೂಡಲೇ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಹಿಂದೂ, ಮುಸ್ಲಿಂ, ಕ್ರೈಸ್ತ ಸ್ನೇಹಿತ ಬಳಗದ ಅಶ್ಪಕ್ ಕುಮಾಟಕರ್ ಒತ್ತಾಯಿಸಿದರು.
ಕಾಶ್ಮೀರಿ ಫೈಲ್ಸ್ ಸಿನಿಮಾ ಬ್ಯಾನ್ ಮಾಡಬೇಕೆಂಬ ಆಗ್ರಹ.. ಭಾರತ ದೇಶ ಜಾತ್ಯಾತೀತ ರಾಷ್ಟ್ರ. ಇಲ್ಲಿನ ಪ್ರತಿಯೊಬ್ಬ ನಾಗರಿಕ ಜಾತಿ, ಧರ್ಮ, ಭೇದ, ಭಾವವಿಲ್ಲದೇ ಒಟ್ಟಾಗಿ ಅಣ್ಣ-ತಮ್ಮಂದಿರ ಹಾಗೇ ಜೀವಿಸುತ್ತಿದ್ದೇವೆ. ಆದರೆ, ಕಾಶ್ಮೀರಿ ಫೈಲ್ಸ್ ಸಿನಿಮಾ ಮೂಲಕ ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಾಶ್ಮೀರಿ ಫೈಲ್ಸ್ ಸಿನಿಮಾ ಸಣ್ಣ ಸಣ್ಣ ಮಕ್ಕಳಲ್ಲಿ ದ್ವೇಷ ಭಾವನೆ ಮೂಡಿಸುತ್ತಿದೆ. ಕಾಶ್ಮೀರ ಫೈಲ್ಸ್‌ಗಿಂತ, ಜೇಮ್ಸ್ ಸಿನಿಮಾಗೆ ಟ್ಯಾಕ್ಸ್ ವಿನಾಯಿತಿ ನೀಡಬೇಕಿತ್ತು. ಅಪ್ಪು ಮಾಡಿದ ಒಳ್ಳೆಯ ಕೆಲಸಕ್ಕೆ ಬೆಲೆ ಸಿಗುತ್ತಿತ್ತು ಎಂದರು. ಕೂಡಲೇ ರಾಷ್ಟ್ರಪತಿಗಳು ಚಿತ್ರವನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪ್ರವೀಣ ಕಟ್ಟಿ, ಪುಷ್ಪರಾಜ ಹಲ್ಲಿ ಇದ್ದರು.
ಇದನ್ನೂ ಓದಿ:ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದು ಕೊರೊನಾಗಿಂತ ಅಪಾಯಕಾರಿ: ತನ್ವೀರ್ ಸೇಠ್