ಹುಬ್ಬಳ್ಳಿ: ಕೋವಿಡ್-19 ಪರೀಕ್ಷೆಗೆ ಶಂಕಿತರ ಗಂಟಲು ದ್ರವದ ಪ್ರಯೋಗಾಲಯ ಮಾದರಿ ಸಂಗ್ರಹಿಸಲು ಕೊರಿಯಾ ದೇಶವನ್ನು ಅನುಕರಣೆ ಮಾಡುತ್ತಿರುವ ಟೆಲಿಫೋನ್ ಬೂತ್ಗಳ ಮಾದರಿಯನ್ನು ಗದಗದ ವೈದ್ಯ ಡಾ.ಪ್ರಕಾಶ ಸಂಕನೂರ ಅಲ್ಪ ಬದಲಾವಣೆಗಳೊಂದಿಗೆ ಅಭಿವೃದ್ಧಿಪಡಿಸಿದ್ದಾರೆ.
ಕೊರಿಯಾ ಮಾದರಿಯ ಟೆಲಿಫೋನ್ ಬೂತ್ ಮಾದರಿ ಅಭಿವೃದ್ಧಿಪಡಿಸಿದ ಗದಗದ ವೈದ್ಯ - Laboratory of suspected throat fluid
ಹುಬ್ಬಳ್ಳಿ ಯಂಗ್ ಇಂಡಿಯಾ ಸಂಸ್ಥೆಯ ಡಾ.ಶ್ರೀನಿವಾಸ ಜೋಷಿ ಅವರ ತಂಡವೂ ಇಂದು ಇದೇ ಮಾದರಿಯ ಮತ್ತೊಂದು ಬೂತ್ ಅನ್ನು ಕಿಮ್ಸ್‌ಗೆ ನೀಡಿದೆ.
ಟೆಲಿಫೋನ್ ಬೂತ್ ಮಾದರಿ
ಗದಗಿನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮೊದಲ ಬಾರಿಗೆ ಇದನ್ನು ಅಳವಡಿಸಲಾಗಿದೆ. ಇಂದು ಅದರ ಮತ್ತೊಂದು ಬೂತ್ ಅನ್ನು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹುಬ್ಬಳ್ಳಿ ಕಿಮ್ಸ್‌ಗೆ ಹಸ್ತಾಂತರಿಸಿದರು.
ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಅರುಣ ಕುಮಾರ್ ಚೌಹಾಣ್ ಸೇರಿದಂತೆ ತಜ್ಞರು ಈ ಸಾಧನವನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಇದ್ದರು.