ಹುಬ್ಬಳ್ಳಿ: ಸುಜಲಾನ್ ಗ್ಲೋಬಲ್ ಸರ್ವೀಸಸ್ ಸಂಸ್ಥೆಯು ಬಾಕಿ ಉಳಿಸಿಕೊಂಡಿದ್ದ 113 ಕಾರ್ಮಿಕರ 10 ತಿಂಗಳ ವೇತನವನ್ನು ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ವೆಂಕಟೇಶ್ ಶಿಂದಿಹಟ್ಟಿ ಸಂಸ್ಥೆಯಿಂದ ವಸೂಲಿ ಮಾಡಿ ಕಾರ್ಮಿಕರಿಗೆ ಚೆಕ್ ಮೂಲಕ ಪಾವತಿ ಮಾಡಿದ್ದಾರೆ.
ಕಾರ್ಮಿಕರಿಗೆ 10 ತಿಂಗಳ ಬಾಕಿ ವೇತನ ಪಾವತಿಸಿದ ಸುಜಲಾನ್ ಗ್ಲೋಬಲ್ ಸರ್ವೀಸಸ್ ಸಂಸ್ಥೆ - ಕಾರ್ಮಿಕರ ಬಾಕಿ ವೇತನ ಪಾವತಿ
ಜುಲೈ 26ರಂದು ಹುಬ್ಬಳ್ಳಿ ಉಪ ಕಾರ್ಮಿಕ ಕಚೇರಿಗೆ ಆಗಮಿಸಿದ ಉಪ ಕಾರ್ಮಿಕ ಆಯುಕ್ತ ವೆಂಕಟೇಶ್ ಶಿಂದಿಹಟ್ಟಿ, ಸಂಸ್ಥೆಯ ಕಾರ್ಮಿಕರಿಗೆ ವೇತನದ ಚೆಕ್ಗಳನ್ನು ಹಸ್ತಾಂತರಿಸಿದರು..
![ಕಾರ್ಮಿಕರಿಗೆ 10 ತಿಂಗಳ ಬಾಕಿ ವೇತನ ಪಾವತಿಸಿದ ಸುಜಲಾನ್ ಗ್ಲೋಬಲ್ ಸರ್ವೀಸಸ್ ಸಂಸ್ಥೆ Cheq distribution](https://etvbharatimages.akamaized.net/etvbharat/prod-images/768-512-03:14:06:1593251046-kn-hbl-06-cheque-vitarane-av-7208089-27062020150735-2706f-1593250655-265.jpg)
Cheq distribution
ಈ ಕುರಿತು ಪ್ರಕರಣ ದಾಖಲಿಸಿ ಕೊಂಡಿದ್ದ ಕಾರ್ಮಿಕ ಇಲಾಖೆ ಸುಜಲಾನ್ ಗ್ಲೋಬಲ್ ಸರ್ವೀಸಸ್ ಸಂಸ್ಥೆಯಿಂದ ಬಾಕಿ ವೇತನ ಮೊತ್ತ 1,33,31,640 ರೂಪಾಯಿಗಳನ್ನು ನಿಯಮಾನುಸಾರ ವಸೂಲಿ ಮಾಡಿದೆ.
ಜುಲೈ 26ರಂದು ಹುಬ್ಬಳ್ಳಿ ಉಪ ಕಾರ್ಮಿಕ ಕಚೇರಿಗೆ ಆಗಮಿಸಿದ ಉಪ ಕಾರ್ಮಿಕ ಆಯುಕ್ತ ವೆಂಕಟೇಶ್ ಶಿಂದಿಹಟ್ಟಿ, ಸಂಸ್ಥೆಯ ಕಾರ್ಮಿಕರಿಗೆ ವೇತನದ ಚೆಕ್ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕರು ಉಪ ಆಯುಕ್ತರನ್ನು ಸನ್ಮಾನಿಸಿದರು.