ಧಾರವಾಡ: ಕೊರೊನಾ ಭೀತಿಯಿಂದ ಲಾಕ್ಡೌನ್ ಮಾಡಲಾಗಿದ್ದು, ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಈ ಸಮಯದಲ್ಲಿ ಮದುವೆ, ಸಭೆ ಸಮಾರಂಭಗಳು ನಡೆಯುತ್ತಿದ್ದವು. ಲಾಕ್ಡೌನ್ ಎಲ್ಲದಕ್ಕೂ ಬ್ರೇಕ್ ಹಾಕಿದೆ. ಹಾಗಾಗಿ ಆನ್ಲೈನ್ ಮೂಲಕ ಮೆಹೆಂದಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ಆನ್ಲೈನ್ನಲ್ಲಿ ಸುದಿಶಾ ಇವೆಂಟ್ಸ್ನಿಂದ ಮೆಹೆಂದಿ ಸ್ಪರ್ಧೆ - ಲಾಕ್ ಡೌನ್ ಹಿನ್ನೆಲೆ
ನಗರದ ಸುದಿಶಾ ಇವೆಂಟ್ಸ್ ವತಿಯಿಂದ ಮಹಿಳೆಯರಿಗಾಗಿ ಮೆಹಂದಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಸ್ಪರ್ಧೆ ಯಾವುದೋ ಹಾಲ್ನಲ್ಲಿ ನಡೆದಿಲ್ಲ. ಬದಲಾಗಿ ಆನ್ಲೈನ್ನಲ್ಲಿ ಸ್ಪರ್ಧೆ ಜರುಗಿದ್ದು, ಸುಮಾರು 30ಕ್ಕೂ ಹೆಚ್ಚು ಯುವತಿಯರು ಪಾಲ್ಗೊಂಡು ಎಲ್ಲರ ಗಮನ ಸೆಳೆಯುವಂತೆ ಕೈ ಮೇಲೆ ಮೆಹಂದಿ ಹಾಕಿ ಗಮನ ಸೆಳೆದಿದ್ದಾರೆ.

ಲಾಕ್ ಡೌನ್ ಹಿನ್ನೆಲೆ: ಆನ್ ಲೈನ್ ನಲ್ಲಿ ಸುದಿಶಾ ಇವೆಂಟ್ಸ್ ಮೆಹೆಂದಿ ಸ್ಪರ್ಧೆ ಆಯೋಜನೆ
ನಗರದ ಸುದಿಶಾ ಇವೆಂಟ್ಸ್ ವತಿಯಿಂದ ಮಹಿಳೆಯರಿಗಾಗಿ ಮೆಹಂದಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಸ್ಪರ್ಧೆ ಯಾವುದೋ ಹಾಲ್ನಲ್ಲಿ ನಡೆದಿಲ್ಲ. ಬದಲಾಗಿ ಆನ್ಲೈನ್ನಲ್ಲಿ ಸ್ಪರ್ಧೆ ಜರುಗಿದ್ದು, ಸುಮಾರು 30ಕ್ಕೂ ಹೆಚ್ಚು ಯುವತಿಯರು ಪಾಲ್ಗೊಂಡು ಎಲ್ಲರ ಗಮನ ಸೆಳೆಯುವಂತೆ ಕೈ ಮೇಲೆ ಮೆಹಂದಿ ಹಾಕಿ ಗಮನ ಸೆಳೆದಿದ್ದಾರೆ.
ಸುದಿಶಾ ಇವೆಂಟ್ಸ್ ಬೇಸಿಗೆ ಸಂದರ್ಭದಲ್ಲಿ ಮನರಂಜನೆಗಾಗಿ ಆನ್ಲೈನ್ ಮೂಲಕ ಇಂತದೊಂದು ಸ್ಪರ್ಧೆ ನಡೆಸಿ, ಸ್ಪರ್ಧೆಯಲ್ಲಿ ಪಾಲ್ಗೊಂಡ ಕೆಲವರನ್ನು ಆಯ್ಕೆ ಮಾಡಿ ಅವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಗೌರವಿಸಿದೆ.