ಕರ್ನಾಟಕ

karnataka

ETV Bharat / city

ಟೀಚರ್‌ ನೀವು ನಮ್ ಶಾಲೆ ಬಿಟ್ಟು ಹೋಗಬ್ಯಾಡ್ರೀ, ಇಲ್ಲೇ ಇರಿ.. ನೆಚ್ಚಿನ ಶಿಕ್ಷಕಿ ವರ್ಗಾವಣೆಗೆ ಮಕ್ಕಳು ಕಣ್ಣೀರು.. - ಶಿಕ್ಷಕಿ ವರ್ಗಾವಣೆಗೆ ಮಕ್ಕಳ ಕಣ್ಣೀರು

ಕಳೆದ 12 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕಿ ಶಿವಲೀಲಾ ಅವರನ್ನು ಧಾರವಾಡ ತಾಲೂಕಿನ ನಿಗದಿ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿದೆ. ಇಂದು ಶಿಕ್ಷಕಿ ನಿಯುಕ್ತಿ ಮಾಡಿದ ಶಾಲೆಗೆ ತೆರಳುವಾಗ ಮಕ್ಕಳು ಶಿಕ್ಷಕಿಯನ್ನು ಸುತ್ತುವರಿದು ಕಣ್ಣೀರು ಸುರಿಸಿ ಪ್ರೀತಿ ವ್ಯಕ್ತಪಡಿಸಿದರು..

favorite teacher
ನೆಚ್ಚಿನ ಶಿಕ್ಷಕಿ ವರ್ಗಾವಣೆ

By

Published : Dec 3, 2021, 4:10 PM IST

Updated : Dec 3, 2021, 4:59 PM IST

ಹುಬ್ಬಳ್ಳಿ :ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತಮ್ಮ ನೆಚ್ಚಿನ ಶಿಕ್ಷಕಿ ವರ್ಗಾವಣೆಯಾಗಿದ್ದಕ್ಕೆ ವಿದ್ಯಾರ್ಥಿಗಳು ಕಣ್ಣೀರು ಹಾಕಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಶಾಲೆಯಲ್ಲಿ ನಡೆದಿದೆ.

ತಾಲೂಕಿನ ಬ್ಯಾಹಟ್ಟಿ ಶಾಲೆಯಲ್ಲಿ ಕಳೆದ 12 ವರ್ಷ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕಿ ಶಿವಲೀಲಾ ಅವರನ್ನು ಧಾರವಾಡ ತಾಲೂಕಿನ ನಿಗದಿ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿದೆ. ಇಂದು ಶಿಕ್ಷಕಿ ನಿಯುಕ್ತಿ ಮಾಡಿದ ಶಾಲೆಗೆ ತೆರಳುವಾಗ ಮಕ್ಕಳು ಶಿಕ್ಷಕಿಯನ್ನು ಸುತ್ತುವರಿದು ಕಣ್ಣೀರು ಸುರಿಸಿ ಪ್ರೀತಿ ವ್ಯಕ್ತಪಡಿಸಿದರು.

'ಶಿವಲೀಲಾ ಟೀಚರ್ ನೀವು ನಮ್ಮ ಶಾಲೆ ಬಿಟ್ಟು ಹೋಗಬ್ಯಾಡ್ರಿ.. ನಮ್ಮ ಶಾಲೆಯಲ್ಲೇ ಇರಿ' ಎಂದು ಮಕ್ಕಳು ಗೋಗರೆಯುತ್ತಿದ್ದುದು ಮಕ್ಕಳು ಶಿಕ್ಷಕರನ್ನು ಎಷ್ಟರ ಮಟ್ಟಿಗೆ ಪ್ರೀತಿಸಿಸುತ್ತಿದ್ದರು ಎಂಬುದನ್ನು ಸಾಕ್ಷೀಕರಿಸುತ್ತಿತ್ತು.

ಅಲ್ಲದೇ, ಶಿಕ್ಷಕಿಯ‌ ಕೈ ಹಿಡಿದು ಮುಂದೆ ಹೋಗದಂತೆ ತಡೆದು ಕಣ್ಣೀರು ಹಾಕಿದರು. ಮಕ್ಕಳ ಕಣ್ಣೀರು ಹಾಕಿದ್ದನ್ನು ಕಂಡು ಶಿಕ್ಷಕಿ ಶಿವಲೀಲಾ ಅವರೂ ಭಾವುಕರಾದ ಘಟನೆಯೂ ನಡೆಯಿತು.

Last Updated : Dec 3, 2021, 4:59 PM IST

ABOUT THE AUTHOR

...view details