ಹುಬ್ಬಳ್ಳಿ: ಜಮೀನು ವಿವಾದ ಹಿನ್ನೆಲೆ ಶಾಲೆ ಬಾಗಿಲು ಬಂದ್ ಮಾಡಿರುವ ಘಟನೆಯೊಂದು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ. ಸಂಗಮೇಶ್ವರ ಪ್ರೌಢ ಶಾಲೆ ಬಂದ್ ಆಗಿದ್ದಕ್ಕೆ ಶಾಲೆಯ ಮುಂದೆ ಪ್ರತಿಭಟಿಸಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಜಮೀನು ವಿವಾದಕ್ಕೆ ಶಾಲೆ ಬಂದ್; ಬಾಗಿಲು ತೆಗೆಯುವಂತೆ ಹಠ ಹಿಡಿದ ವಿದ್ಯಾರ್ಥಿಗಳು - ಹುಬ್ಬಳ್ಳಿ
ಸಂಗಮೇಶ್ವರ ಸಂಸ್ಥೆಗೆ ದಾನ ನೀಡಿದ್ದ ಜಮೀನಿನ ಜಾಗ ನಮಗೆ ಸೇರಿದ್ದೆಂದು ವ್ಯಕ್ತಿಯೊಬ್ಬರು ಖಾಸಗಿ ಶಾಲೆಗೆ ಬೀಗ ಹಾಕಿ ತಕರಾರು ತೆಗೆದಿದ್ದಾರೆ. ಆದರೆ ಶಾಲೆ ತೆರೆಯುವವರೆಗೂ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನೆ
ಸಂಗಮೇಶ್ವರ ಸಂಸ್ಥೆಗೆ ದಾನ ನೀಡಿದ್ದ ಜಮೀನಿನ ಜಾಗ ನಮಗೆ ಸೇರಿದ್ದೆಂದು ವ್ಯಕ್ತಿಯೊಬ್ಬರು ಖಾಸಗಿ ಶಾಲೆಗೆ ಬೀಗ ಹಾಕಿ ತಕರಾರು ತೆಗೆದಿದ್ದಾರೆ. ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಶಾಲೆ ತೆರೆಯುವವರೆಗೂ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ವಿದ್ಯಾರ್ಥಿಗಳಿಗೆ ಗ್ರಾಮದ ಯುವಕರೂ ಸಾಥ್ ನೀಡಿದ್ದಾರೆ.