ಕರ್ನಾಟಕ

karnataka

ETV Bharat / city

ಬಸ್ ಪಾಸ್ ವಿತರಣೆಯಲ್ಲಿ ಹೆಚ್ಚಿನ ಹಣ ಸಂಗ್ರಹ: ವಾಯವ್ಯ ಸಾರಿಗೆ ವಿರುದ್ಧ ಅಸಮಾಧಾನಗೊಂಡ ವಿದ್ಯಾರ್ಥಿಗಳು - ಬಸ್ ಪಾಸ್ ವಿತರಣೆಯಲ್ಲಿ ಹೆಚ್ಚಿನ ಹಣ ಸಂಗ್ರಹ

ಜನವರಿಯಿಂದ ಶಾಲಾ ಕಾಲೇಜುಗಳು ಆರಂಭವಾಗಿವೆ. ಆದ್ರೆ ವಾಯುವ್ಯ ಸಾರಿಗೆಯವರು ಮಾತ್ರ ನವೆಂಬರ್ 2020ರಿಂದಲೇ ಬಸ್ ಪಾಸ್ ನೀಡಿ ಹಣ ಸಂಗ್ರಹಿಸಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

bus pass
bus pass

By

Published : Feb 23, 2021, 7:05 PM IST

ಹುಬ್ಬಳ್ಳಿ: ಕೊರೊನಾ ಹೊಡೆತಕ್ಕೆ ಬಂದ್ ಆಗಿದ್ದ ಶಾಲಾ-ಕಾಲೇಜುಗಳು ಈಗ ಹಂತ ಹಂತವಾಗಿ ಆರಂಭವಾಗುತ್ತಿವೆ. ಜನವರಿಯಿಂದ ಶಾಲಾ-ಕಾಲೇಜುಗಳು ಆರಂಭವಾಗಿವೆ. ಆದ್ರೆ ವಾಯುವ್ಯ ಸಾರಿಗೆಯವರು ಮಾತ್ರ ನವೆಂಬರ್ 2020ರಿಂದಲೇ ಬಸ್ ಪಾಸ್ ನೀಡಿ ಹಣ ಸಂಗ್ರಹಿಸಿದ್ದಾರೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾ ಹಿನ್ನೆಲೆ ಮನೆ ಸೇರಿದ್ದ ವಿದ್ಯಾರ್ಥಿಗಳು ಇದೀಗ ಹೊಸ ಹುಮ್ಮಸ್ಸಿನಿಂದ ಶಾಲೆಗಳತ್ತ, ಕಾಲೇಜಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಶಾಲಾ-ಕಾಲೇಜುಗಳಿಗೆ ಪ್ರವೇಶ ಶುಲ್ಕ ವಿಚಾರ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಪಾಲಕರ ಜೇಬಿಗೆ ವಾಯುವ್ಯ ಸಾರಿಗೆ ಸಂಸ್ಥೆ ಮತ್ತೆ ಕತ್ತರಿ ಹಾಕಿರೋದು ಪಾಲಕರ ಮತ್ತು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ವಾಯವ್ಯ ಸಾರಿಗೆ ವಿರುದ್ಧ ವಿದ್ಯಾರ್ಥಿಗಳ ಅಸಮಾಧಾನ

ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಪ್ರಯಾಣ ಮಾಡದಿದ್ರೂ ಬಸ್ ಪಾಸ್ ಮಾತ್ರ ನವೆಂಬರ್ ತಿಂಗಳಿಂದ ಎಂದು ನಮೂದು ಮಾಡಿ ಹೆಚ್ಚುವರಿ ಹಣ ವಸೂಲಿ ಮಾಡಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

For All Latest Updates

ABOUT THE AUTHOR

...view details