ಹುಬ್ಬಳ್ಳಿ: ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(MES) ಪುಂಡಾಟವನ್ನು ನಾನು ಖಂಡಿಸುತ್ತೇನೆ. ಈಗಾಗಲೇ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಸರ್ಕಾರಿ ಆಸ್ತಿ-ಪಾಸ್ತಿಗೆ ಹಾನಿ ಮಾಡಿದ, ಪೊಲೀಸ್ ವಾಹನ ಜಖಂಗೊಳಿಸಿದವರನ್ನು ಬಂಧಿಸಲಾಗಿದೆ. ರಾಷ್ಟ್ರ ಭಕ್ತರ ಪ್ರತಿಮೆಗಳಿಗೆ ಅಪಮಾನ ಪ್ರವೃತ್ತಿ ಸಹಿಸುವುದಿಲ್ಲ. ರಾಷ್ಟ್ರ ಭಕ್ತರ ಪ್ರತಿಮೆಗಳನ್ನು ಧ್ವಂಸ ಮಾಡುವುದು ಅಪರಾಧ. ನಾಡಿನ ಹಿರಿಯ, ದೇಶಭಕ್ತರಿಗೆ ಅಪಮಾನಿಸುವ ಮೂಲಕ ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವುದು ಸರಿಯಲ್ಲ ಎಂದರು.