ಕರ್ನಾಟಕ

karnataka

ETV Bharat / city

ವೈದ್ಯಕೀಯ ವಿದ್ಯಾರ್ಥಿಗಳು ತಂಗಿದ್ದ ‌ಕಟ್ಟಡದ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು: ಓರ್ವನಿಗೆ ಗಾಯ - stones pelted on Medical students staying Building

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಇನ್ಫೋಸಿಸ್ ಧರ್ಮಶಾಲಾ ಕಟ್ಟಡದಲ್ಲಿ ವೈದ್ಯ ವಿದ್ಯಾರ್ಥಿಗಳು ಉಳಿದುಕೊಳ್ಳಲು ಕಿಮ್ಸ್ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ. ಆದ್ರೆ ತಡರಾತ್ರಿ ಏಕಾಏಕಿಯಾಗಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಈ ವೇಳೆ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ.

Hubli
ವೈದ್ಯಕೀಯ ವಿದ್ಯಾರ್ಥಿಗಳು ತಂಗಿದ್ದ ‌ಕಟ್ಟದ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

By

Published : Feb 27, 2021, 10:31 AM IST

ಹುಬ್ಬಳ್ಳಿ: ಕಿಮ್ಸ್​ನ ವೈದ್ಯಕೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ತಂಗಿದ್ದ ಕಟ್ಟಡದ ಮೇಲೆ ಕಿಡಿಗೇಡಿಗಳು ತಡರಾತ್ರಿ ಕಲ್ಲು ತೂರಿದ ಘಟನೆ ನಡೆದಿದೆ.

ವೈದ್ಯಕೀಯ ವಿದ್ಯಾರ್ಥಿಗಳು ತಂಗಿದ್ದ ‌ಕಟ್ಟದ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ: ಓರ್ವನಿಗೆ ಗಾಯ

ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಇನ್ಫೋಸಿಸ್ ಧರ್ಮಶಾಲಾ ಕಟ್ಟಡದಲ್ಲಿ ವೈದ್ಯ ವಿದ್ಯಾರ್ಥಿಗಳು ಉಳಿದುಕೊಳ್ಳಲು ಕಿಮ್ಸ್ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ. ಆದ್ರೆ ತಡರಾತ್ರಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಕಿಟಕಿ ಗ್ಲಾಸ್ ಒಡೆದಿದ್ದಲ್ಲದೆ, ಓರ್ವ ವಿದ್ಯಾರ್ಥಿಯ ಮೊಣಕಾಲಿಗೆ ಗಾಯವಾಗಿದೆ.

ಕಿಮ್ಸ್​ನ 136 ವೈದ್ಯಕೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಈ ಕಟ್ಟಡದಲ್ಲಿದ್ದಾರೆ. ಎಂದಿನಂತೆ ಊಟ ಮಾಡಿ ಕಿಟಗಿ ಬಳಿ ಮಲಗಿದ್ದ ವಿದ್ಯಾರ್ಥಿಗಳ ಮೇಲೆ ಕಲ್ಲು, ಇಟ್ಟಿಗೆ ತೂರಿದ್ದು, ಕಿಟಕಿಯ ಗಾಜುಗಳು ಪುಡಿಪುಡಿಯಾಗಿ ಹಾಸಿಗೆಯಲ್ಲಿ ಬಿದ್ದಿದೆ. ಇದರಿಂದ ವಿದ್ಯಾರ್ಥಿಗಳು ಕೆಲಕಾಲ ಆತಂಕಗೊಂಡಿದ್ದರು.

ಬಳಿಕ ಸ್ಥಳಕ್ಕಾಗಮಿಸಿದ ಕಿಮ್ಸ್ ಭದ್ರತಾ ಸಿಬ್ಬಂದಿ ಹಾಗೂ ಪಕ್ಕದಲ್ಲಿರುವ ಕಿಮ್ಸ್ ಕ್ವಾಟರ್ಸ್ ನಿವಾಸಿಗಳು ಗಾಯಾಳು ವಿದ್ಯಾರ್ಥಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ABOUT THE AUTHOR

...view details