ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ: ಸಾರ್ವಜನಿಕ ಸಾರಿಗೆ ಬಸ್​​​ನಲ್ಲಿ ಪ್ರಯಾಣಿಕರ ಬದಲಿಗೆ ಕಲ್ಲು ಸಾಗಣೆ!

ಕಲ್ಲುಗಳನ್ನು ಸಾಗಿಸಲು ಉತ್ತಮ ಬಸ್​​ಗಳನ್ನು ಬಳಸಿಕೊಂಡಿರುವ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳ ನಡೆ ವಿರುದ್ಧ ಜನರಿಂದ ಆಕ್ರೋಶ ವ್ಯಕ್ತವಾಗಿದೆ.

A bus carrying stones
ಕಲ್ಲುಗಳನ್ನು ಹೊತ್ತೊಯ್ದ ಬಸ್​

By

Published : Jul 30, 2020, 12:25 PM IST

Updated : Jul 30, 2020, 1:26 PM IST

ಹುಬ್ಬಳ್ಳಿ: ಜನರು ‌ಪ್ರಯಾಣಿಸುವ ಬಸ್​​​ ಅನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸರಕು ಸಾಗಿಸುವ ವಾಹನದಂತೆ ಬಳಸಿಕೊಂಡಿದೆ. ಇದು ಸಾರ್ವಜನಿಕರ ವಲಯದಲ್ಲಿ ಭಾರೀ ಆಕ್ರೋಶಕ್ಕೆ ವ್ಯಕ್ತವಾಗಿದೆ.

ಜನರು ಓಡಾಡಲು ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸದ ಸಾರಿಗೆ ಇಲಾಖೆ, ನಗರದ ಹೊಸೂರು ಸರ್ಕಲ್​​ನಲ್ಲಿ ರಸ್ತೆ ವಿಭಜಕ ಕಾಮಗಾರಿಗೆ ಅಳವಡಿಸಿದ್ದ ಕಲ್ಲುಗಳನ್ನು ಸಾಗಿಸಲು ಸುಸಜ್ಜಿತವಾದ ಬಸ್​ ಅನ್ನು ಬಳಸಿಕೊಳ್ಳಲಾಗಿದೆ.

ಕಲ್ಲುಗಳನ್ನು ಬಸ್​​ಗೆ ತುಂಬುತ್ತಿರುವ ಸಿಬ್ಬಂದಿ

ಕಲ್ಲುಗಳನ್ನು ಬಸ್​​ನಲ್ಲಿ ತುಂಬಿ ಡಿಪೋಗೆ ಸಾಗಿಸಲಾಗಿದೆ. ಇದಕ್ಕೆ ಸಾರಿಗೆ ಇಲಾಖೆ ಸಿಬ್ಬಂದಿಯನ್ನು ಕೂಲಿ ಆಳುಗಳಂತೆ ಬಳಸಿಕೊಂಡಿರುವುದು ವಿಪರ್ಯಾಸ.

ಕಲ್ಲುಗಳನ್ನು ಹೊತ್ತೊಯ್ದ ಬಸ್​

ಸರಿಯಾದ ಆದಾಯವಿಲ್ಲದೆ ಸಂಸ್ಥೆಯು ಆರ್ಥಿಕ ನಷ್ಟದಲ್ಲಿದೆ ಎಂದು ಕೊರಗುತ್ತಿರುವ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಉತ್ತಮ ಬಸ್​​ಗಳನ್ನು ಸರಕು ಸಾಗಿಸುವ ವಾಹನಗಳಂತೆ ಬಳಸಿಕೊಂಡಿದ್ದು ಎಷ್ಟರಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Last Updated : Jul 30, 2020, 1:26 PM IST

ABOUT THE AUTHOR

...view details