ಕರ್ನಾಟಕ

karnataka

ETV Bharat / city

ಹುಬ್ಬಳ್ಳಿಯಲ್ಲಿ ಚರ್ಚ್​ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ - undefined

ನಗರದ ಸುಶಾಂತಿ ಚರ್ಚ್ ಮೇಲೆ ಕಿಡಿಗೇಡಿಗಳು ನಿನ್ನೆ ರಾತ್ರಿ ಕಲ್ಲು ತೂರಾಟ ನಡೆಸಿದ್ದು, ಹಳೇ ಹುಬ್ಬಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಚರ್ಚ್ ಮೇಲೆ ಕಲ್ಲು ತೂರಾಟ

By

Published : May 20, 2019, 10:39 AM IST

ಹುಬ್ಬಳ್ಳಿ: ನಗರದ ಹೆಗ್ಗೇರಿಯ ಗುಡಿ ಪ್ಲಾಟ್​ನಲ್ಲಿರುವ ಸುಶಾಂತಿ ಚರ್ಚ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

ನಿನ್ನೆ ರಾತ್ರಿ 10.15 ರ ಸುಮಾರಿಗೆ ಕಿಡಿಗೇಡಿಗಳು ಏಕಾಏಕಿ ಬಂದು ಚರ್ಚ್ ಮೇಲೆ ಕಲ್ಲು ಎಸೆದು ಹೋಗಿದ್ದಾರೆ.‌ ಇದರಿಂದ ಚರ್ಚ್‌ ಮುಂಭಾಗ ಹಾಕಲಾಗಿರುವ ತಗಡು ಹಾಗೂ ಎರಡು ಹಂಚು ತುಂಡಾಗಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹಳೇ ಹುಬ್ಬಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಕಳೆದ ವಾರವೂ ಕೆಲವು ಕಿಡಿಗೇಡಿಗಳು ಚರ್ಚ್ ಮೇಲೆ ಕಲ್ಲು ತೂರಿದ್ದರು. ಈ ಕುರಿತು ಕೂಡ ಪೊಲೀಸರಿಗೆ ದೂರು ನೀಡಲಾಗಿತ್ತು.

For All Latest Updates

TAGGED:

ABOUT THE AUTHOR

...view details