ಕರ್ನಾಟಕ

karnataka

ETV Bharat / city

ನೋಂದಣಿ ಚೀಟಿ ನೀಡೋದು ಬಿಟ್ಟು ಕ್ಯಾಂಡಿಕ್ರಷ್  ಆಡುತ್ತಾ ಕುಳಿತ ಸಿಬ್ಬಂದಿ!: ವಿಡಿಯೋ - ಹುಬ್ಬಳ್ಳಿ ನಗರದ ಕಿಮ್ಸ್ ಆಸ್ಪತ್ರೆ

ಕಿಮ್ಸ್ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್​ನಲ್ಲೇ ರೋಗಿಗಳಿಗೆ ನೋಂದಣಿ ಚೀಟಿ ನೀಡುವುದನ್ನು ಬಿಟ್ಟು ಸಿಬ್ಬಂದಿಯೊಬ್ಬ ಕ್ಯಾಂಡಿಕ್ರಷ್ ಗೇಮ್ ಆಡುತ್ತ ಕುಳಿತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ವಿಡಿಯೋ ಮಾಡಿರುವ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ

candy crush
candy crush

By

Published : Jun 26, 2020, 1:21 PM IST

ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಎಡವಟ್ಟಿನಿಂದ ರೋಗಿಗಳು ಕಷ್ಟ ಅನುಭವಿಸುವಂತಾಗಿದೆ. ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಆಗಮಿಸುವ ವಿಚಾರದಲ್ಲಿ ಕಿಮ್ಸ್ ಸಿಬ್ಬಂದಿ ಪದೇ ಪದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇಲ್ಲಿ ರೋಗಿಗಳಿಗೆ ನೋಂದಣಿ ಚೀಟಿ ಬೇಕು ಅಂದ್ರೆ ಕ್ಯಾಂಡಿಕ್ರಷ್ ಗೇಮ್ ಮುಗಿಯೋವರೆಗೂ ಕಾಯಬೇಕು. ರೋಗಿಗಳು, ರೋಗಿಗಳ ಸಂಬಂಧಿಕರು ಗಂಟೆಗಟ್ಟಲೇ ಕಾದು ಕುಳಿತುಕೊಳ್ಳಲೇಬೇಕು.

ಕ್ಯಾಂಡಿ ಕ್ರಷ್ ಗೇಮ್ ಆಡುತ್ತಾ ಕುಳಿತ ಸಿಬ್ಬಂದಿ

ರೋಗಿಗಳಿಗೆ ನೋಂದಣಿ ಚೀಟಿ ನೀಡುವುದನ್ನು ಬಿಟ್ಟು ಸಿಬ್ಬಂದಿಯೊಬ್ಬ ಕ್ಯಾಂಡಿಕ್ರಷ್ ಗೇಮ್ ಆಡುತ್ತ ಕುಳಿತಿದ್ದಾನೆ. ಗಂಟೆಗಟ್ಟಲೇ ಕ್ಯೂನಲ್ಲಿ ರೋಗಿಗಳು ಕಾಯುತ್ತಿದ್ದರೂ ಕ್ಯಾರೇ ಎನ್ನದೇ ಗೇಮ್​ನಲ್ಲಿ ಬ್ಯುಸಿಯಾಗಿದ್ದಾನೆ. ​

ಎಮರ್ಜೆನ್ಸಿ ವಾರ್ಡ್​ನಲ್ಲೇ ಈ ರೀತಿಯ ದೃಶ್ಯವನ್ನು ರೋಗಿಯ ಸಂಬಂಧಿಯೊಬ್ಬರು ಸೆರೆ ಹಿಡಿದಿದ್ದಾರೆ. ಕರ್ತವ್ಯ ನಿರ್ವಹಿಸುವುದನ್ನು ಬಿಟ್ಟು ನಿತ್ಯ ಕ್ಯಾಂಡಿಕ್ರಷ್ ಗೇಮ್ ಆಡುತ್ತ ಕುಳಿತುಕೊಳ್ಳುವ ಸಿಬ್ಬಂದಿ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ABOUT THE AUTHOR

...view details