ಕರ್ನಾಟಕ

karnataka

ETV Bharat / city

ಹಿಂದೂ ಯುವಕನ‌ ಹತ್ಯೆ ಖಂಡಿಸಿ ಶ್ರೀರಾಮ ಸೇನೆ ಪ್ರತಿಭಟನೆ - undefined

ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಶಿವು ಉಪ್ಪಾರ ಹತ್ಯೆ ಖಂಡಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದ ಶ್ರೀರಾಮ ಸೇನೆ ಕಾರ್ಯಕರ್ತರು, ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದರು.

ಶ್ರೀರಾಮ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

By

Published : May 26, 2019, 8:03 PM IST

ಹುಬ್ಬಳ್ಳಿ: ಬೆಳಗಾವಿಯ ಬಾಗೇವಾಡಿಯಲ್ಲಿ ನಡೆದ ಶಿವು ಉಪ್ಪಾರ ಎಂಬ ಹಿಂದೂ ಸಂಘಟನೆ ಕಾರ್ಯಕರ್ತನ ಹತ್ಯೆ ಖಂಡಿಸಿ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಶಿವು ಉಪ್ಪಾರ ಎಂಬಾತನನ್ನು ಮೇ.25 ರಂದು ಬೆಳಗಾವಿಯ ಬಾಗೇಪಲ್ಲಿಯ ಬಸ್ ನಿಲ್ದಾಣದಲ್ಲಿ ಹತ್ಯೆಗೈದು ನೇಣು ಹಾಕಲಾಗಿತ್ತು. ಈ ದುಷ್ಕೃತ್ಯ ಖಂಡಿಸಿ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಶ್ರೀರಾಮ ಸೇನಾ ಹುಬ್ಬಳ್ಳಿ ನಗರ ಘಟಕ ಆಗ್ರಹಿಸಿದೆ.

ಶ್ರೀರಾಮ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

ಶಿವು ಉಪ್ಪಾರ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಅಷ್ಟೇ ಅಲ್ಲದೇ, ಬೆಳಗಾವಿ ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಗೋ ಸಾಗಾಣಿಕೆ ಬಗ್ಗೆ ಪೊಲೀಸಗೆ ಮಾಹಿತಿ ನೀಡಿ ಗೋ ರಕ್ಷಣೆ ಮಾಡುವಲ್ಲಿ ಪ್ರಮುಖನಾಗಿದ್ದನು. ಆದರೆ ಯಾರೋ ದುಷ್ಕರ್ಮಿಗಳು ಶಿವು ಉಪ್ಪಾರ ಅವರನ್ನು ನೇಣು ಹಾಕಿ ಹತ್ಯೆ ಗೈದಿದ್ದಾರೆ. ಈ ಹತ್ಯೆಯನ್ನು ಶ್ರೀರಾಮ ಸೇನಾ ತೀವ್ರವಾಗಿ ಖಂಡಿಸಿದ್ದು, ಸಂಬಂಧಪಟ್ಟ ಆರೋಪಿಗಳನ್ನು ತಕ್ಷಣ ಬಂಧಿಸಿ ಶಿವು ಉಪ್ಪಾರ ಹತ್ಯೆಗೆ ನ್ಯಾಯ ಒದಗಿಸಬೇಕು. ಇಲ್ಲವಾದರೇ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬಂದ್ ಮಾಡಲಾಗುವುದು ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.

For All Latest Updates

TAGGED:

ABOUT THE AUTHOR

...view details