ಧಾರವಾಡ: ಗುರುಪೂರ್ಣಿಮೆ ನಿಮಿತ್ತವಾಗಿ ಧಾರವಾಡದ ಸಾಯಿನಗರದ ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.
ಗುರುಪೂರ್ಣಿಮೆ ಅಂಗವಾಗಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ - ಗುರುಪೂರ್ಣಿಮೆ ಅಂಗವಾಗಿ ಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ
ಗುರುಪೂರ್ಣಿಮೆ ನಿಮಿತ್ತವಾಗಿ ಧಾರವಾಡದ ಸಾಯಿನಗರದ ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.
ನಸುಕಿನ ಜಾವದಲ್ಲಿಯೇ ಆಗಮಿಸಿದ ಭಕ್ತರು ಶಿರಡಿ ಸಾಯಿಬಾಬಾ ದರ್ಶನ ಪಡೆದು ಪುನೀತರಾದರು. ಬಾಬಾ ಮೂರ್ತಿಗೆ ವಿಶೇಷ ಪೂಜೆ, ಕಾಕಡಾರತಿ, ದೂಪಾರತಿ...ಹೀಗೆ ಹಲವು ಕಾರ್ಯಕ್ರಮಗಳು ನಡೆದವು.
ಸತ್ಯನಾರಾಯಣ ಪೂಜೆ ಮಾಡುವುದರ ಜೊತೆಗೆ, ಗುರುಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಿ ಧನ್ಯತಾಭಾವ ಮೆರೆದರು. ವಿಶೇಷವಾಗಿ ಭಕ್ತರಿಗೆ ಅನುಕೂಲವಾಗುವಂತೆ ಅನ್ನಬ್ರಹ್ಮಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಅನ್ನಬ್ರಹ್ಮ ಮೂರ್ತಿಯನ್ನು ಮಹಾರಾಷ್ಟ್ರ ಅಹ್ಮದನಗರದ ಸಂತೋಷ ರೋಹಾಳೆ ಎಂಬವವರು ತಯಾರಿಸಿದ್ದಾರೆ. ಶಿರಡಿಯಲ್ಲಿ ಸಹ ಅನ್ನ ಬ್ರಹ್ಮಮೂರ್ತಿ ತಯಾರಿಸಿದವರೂ ಸಂತೋಷ ರೋಹಾಳೆ ಎಂಬುದು ವಿಶೇಷ.