ಕರ್ನಾಟಕ

karnataka

ETV Bharat / city

ಮೇ 17, 18ರಂದು ಹುಬ್ಬಳ್ಳಿಯಿಂದ ಬಿಹಾರ, ಯುಪಿಗೆ ಶ್ರಮಿಕ ವಿಶೇಷ ರೈಲು ಸೇವೆ - ಬಿಹಾರ, ಉತ್ತರ ಪ್ರದೇಶಕ್ಕೆ ಹುಬ್ಬಳ್ಳಿಯಿಂದ ಶ್ರಮಿಕ ಎಕ್ಸ್ ಪ್ರೆಸ್

ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಹುಬ್ಬಳ್ಳಿ ನೈಋತ್ಯ ರೈಲ್ವೆಯು ಅನ್ಯ ರಾಜ್ಯಗಳಿಗೆ ತೆರಳುವ ವಲಸೆ ಕಾರ್ಮಿಕರು, ಪ್ರವಾಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು ಸೇರಿದಂತೆ ಇತರರಿಗೆ ಶ್ರಮಿಕ ವಿಶೇಷ ರೈಲು ಸಂಚರ ಸೇವೆ ಒದಗಿಸುತ್ತಿದೆ.

Special train from Hubli to Bihar, Uttar Pradesh
ಮೇ 17- 18: ಬಿಹಾರ, ಉತ್ತರ ಪ್ರದೇಶಕ್ಕೆ ಹುಬ್ಬಳ್ಳಿಯಿಂದ ಶ್ರಮಿಕ ಎಕ್ಸ್ ಪ್ರೆಸ್ ವಿಶೇಷ ರೈಲು

By

Published : May 15, 2020, 11:21 PM IST

ಹುಬ್ಬಳ್ಳಿ: ಹುಬ್ಬಳ್ಳಿಯ ನೈಋತ್ಯ ವಲಯದಿಂದ ಮೇ 17 ಮತ್ತು 18ರಂದು ಹೊರ ರಾಜ್ಯಗಳ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ಯಾತ್ರಾರ್ಥಿಗಳು ತಮ್ಮ ತವರಿಗೆ ತೆರಳಲು ಶ್ರಮಿಕ ವಿಶೇಷ ರೈಲು ಸಂಚಾರ ಸೇವೆ ಕಲ್ಪಿಸುತ್ತಿದೆ.

ಮೇ 17ರಂದು ಹುಬ್ಬಳ್ಳಿಯಿಂದ ಬಿಹಾರದ ಕಠಿಹಾರ್ ಹಾಗೂ ಮತ್ತು 18ರಂದು ಹುಬ್ಬಳ್ಳಿಯಿಂದ ಉತ್ತರ ಪ್ರದೇಶದ ಲಕ್ನೋ ಮಾರ್ಗವಾಗಿ ಬಸ್ತಿ ರೈಲು ನಿಲ್ದಾಣದವರೆಗೆ 3 ವಿಶೇಷ ಶ್ರಮಿಕ ರೈಲುಗಳು ತೆರಳಲಿವೆ.

ತಾತ್ಕಾಲಿಕ ವೇಳಾಪಟ್ಟಿ:

ಮೇ 17ರ ಸಂಜೆ 5 ಗಂಟೆಗೆ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಬಿಹಾರದ ಕಠಿಹಾರ್​ಗೆ ಹೊರಡಲಿದೆ. ಮೇ 17 ಮತ್ತು 18ರಂದು ಬೆಳಿಗ್ಗೆ 9 ಗಂಟೆಗೆ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಉತ್ತರ ಪ್ರದೇಶದ ಬಸ್ತಿ ರೈಲು ನಿಲ್ದಾಣಕ್ಕೆ ಎರಡು ರೈಲುಗಳು ಹೊರಡಲಿವೆ.

3 ಶ್ರಮಿಕ ರೈಲುಗಳಿಗೆ ಕೋರಿಕೆ:

ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ಹುಬ್ಬಳ್ಳಿ ರೈಲ್ವೆ ವಿಭಾಗದ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದು, ಮೇ 20 ರಿಂದ 22ರವರಗೆ ನಿತ್ಯ ಒಂದು ರೈಲ ಅನ್ನು ಉತ್ತರ ಪ್ರದೇಶಕ್ಕೆ ಬಿಡಲು ಕೋರಿದ್ದಾರೆ.

ಮೇ 20 ಹಾಗೂ 22ರಂದು ಲಕ್ನೋ ಮಾರ್ಗವಾಗಿ ಉತ್ತರ ಪ್ರದೇಶದ ಬಸ್ತಿ, ಮೇ 21 ರಂದು ಲಕ್ನೋ ಮಾರ್ಗವಾಗಿ ಅಜಮ್‍ಘಡ ನಿಲ್ದಾಣದವರೆಗೆ ರೈಲುಗಳ ವ್ಯವಸ್ಥೆಗೆ ಮನವಿ ಮಾಡಿದ್ದಾರೆ.

For All Latest Updates

TAGGED:

Train timing

ABOUT THE AUTHOR

...view details