ಹುಬ್ಬಳ್ಳಿ:ಕೊರೊನಾ ವೈರಸ್ನಿಂದ ಪಾರಾಗುವುದು ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ. ಅದ್ದರಿಂದ ಕೊರೊನಾ ವಾರಿಯರ್ಸ್ ಕೂಡ ಹೊರತಾಗಿಲ್ಲ. ಕೊರೊನಾ ವಾರಿಯರ್ಸ್ ಕೊರೊನಾ ವಿರುದ್ಧ ಹೋರಾಟ ನಡೆಸಲು ಖಾಸಗಿ ಕಂಪನಿಯೊಂದು ಹೊಸ ಆವಿಷ್ಕಾರದ ಮೂಲಕ ಉತ್ಪನ್ನವೊಂದನ್ನು ಬಿಡುಗಡೆಗೊಳಿಸಿದೆ.
ಅಧುನಿಕ ತಂತ್ರಜ್ಞಾನದ ವಿಶೇಷ ಮಾಸ್ಕ್ ಕೋವಿಡ್ ವಾರಿಯರ್ಗಳಾದ ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗೆ ಉಪಯೋಗವಾಗುವಂತೆ, ಆಧುನಿಕ ತಂತ್ರಜ್ಞಾನ ಬಳಸಿ ಖಾಸಗಿ ಸಂಸ್ಥೆಯೊಂದು Puri Flow V1.0 puryfying respirator ಸಿದ್ದಪಡಿಸಿದ್ದು,ಇದು ಕೊರೊನಾ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದನ್ನು ನಿಯಂತ್ರಿಸುತ್ತದೆ. ಅಲ್ಲದೇ ಗಾಳಿಯನ್ನು ಶುದ್ಧಗೊಳಿಸಲು ಕೂಡ ಸಹಕಾರಿಯಾಗಿದೆ.
ಅಧುನಿಕ ತಂತ್ರಜ್ಞಾನದ ವಿಶೇಷ ಮಾಸ್ಕ್ Abslon engineering pvt.ltd ಎಂಬ ಹುಬ್ಬಳ್ಳಿಯ ಕಂಪನಿಯು ಅಧುನಿಕ ತಂತ್ರಜ್ಞಾನದ ಮಾಸ್ಕನ್ನು ತಯಾರಿಸಿದ್ದು, ಇದರಲ್ಲಿ ಹೆಫಾ ಫಿಲ್ಟರ್ ಅಳವಡಿಸಲಾಗಿದ್ದು, 99.99% ಆಮ್ಲಜನಕ ಶುದ್ದಿಗೊಳಿಸುವುದು. ಅಲ್ಲದೇ ಸುಲಭವಾಗಿ ಕೂಡ ಇದನ್ನು ಕ್ಲೀನ್ ಮಾಡಬಹುದಾಗಿದ್ದು, ಇದರಲ್ಲಿ ಬ್ಯಾಟರಿ ಅಳವಡಿಕೆ ಮಾಡಲಾಗಿದೆ. ಈ ಬ್ಯಾಟರಿ ಏಳು ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ.
ಅಧುನಿಕ ತಂತ್ರಜ್ಞಾನದ ವಿಶೇಷ ಮಾಸ್ಕ್ ಅಧುನಿಕ ತಂತ್ರಜ್ಞಾನದ ಮಾಸ್ಕ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಚಾಲನೆ ನೀಡಿದ್ದು, ಕಂಪನಿಯ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು. ಇದು ರಾಷ್ಟ್ರದಲ್ಲಿಯೇ ಮೊದಲ ಪ್ರಯತ್ನವಾಗಿದ್ದು, ಕೊರೊನಾ ವಾರಿಯರ್ಸ್‌ಗೆ ಉತ್ತಮವಾದ ಅಧುನಿಕ ತಂತ್ರಜ್ಞಾನದ ಮಾಸ್ಕ ಇದಾಗಿದೆ ಎಂದರು.