ಹುಬ್ಬಳ್ಳಿ: ಪ್ರಯಾಣದ ಸಮಯದಲ್ಲಿ ಅಗತ್ಯವಿರುವ ವಸ್ತುಗಳನ್ನು ಪೂರೈಸುವ ಹಿನ್ನೆಲೆಯಲ್ಲಿ 'ಟ್ರಾವೆಲಿಂಗ್ ಕಿಟ್' ವ್ಯವಸ್ಥೆ ಜಾರಿ ಮಾಡುವ ಮೂಲಕನೈಋತ್ಯ ರೈಲ್ವೇ ವಲಯ ಪ್ರಯಾಣಿಕರ ಅನುಕೂಲಕ್ಕಾಗಿ ಶ್ರಮಿಸುತ್ತಿದೆ.
ನೈಋತ್ಯ ರೈಲ್ವೇ ವಲಯದ ಪ್ರಯಾಣಿಕರಿಗೆ 'ಟ್ರಾವೆಲಿಂಗ್ ಕಿಟ್' ಭಾಗ್ಯ - ರೈಲ್ಲೇ ಪ್ರಯಾಣಿಕರ ಟ್ರಾವೆಲಿಂಗ್ ಕಿಟ್ ಯೋಜನೆ
ರೈಲ್ವೆ ಪ್ರಯಾಣದ ಸಮಯದಲ್ಲಿ ಅಗತ್ಯವಿರುವ ವಸ್ತುಗಳನ್ನು ಪೂರೈಸುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೇ ವಲಯ ಪ್ರಯಾಣಿಕರಿಗಾಗಿ ವಿನೂತನ ಯೋಜನೆ ಕೈಗೊಂಡಿದೆ.
![ನೈಋತ್ಯ ರೈಲ್ವೇ ವಲಯದ ಪ್ರಯಾಣಿಕರಿಗೆ 'ಟ್ರಾವೆಲಿಂಗ್ ಕಿಟ್' ಭಾಗ್ಯ southwest-railway-zone-will-traveling-kit-passenger](https://etvbharatimages.akamaized.net/etvbharat/prod-images/768-512-6007370-thumbnail-3x2-travel.jpg)
ನೈಋತ್ಯ ರೈಲ್ವೇ ವಲಯ
ದೂರದ ಊರಿಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ನೈಋತ್ಯ ರೈಲ್ವೇ ವಲಯ ಈ ಪ್ರಯೋಗವನ್ನು ಪ್ರಾರಂಭಿಸಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಕಿಟ್ ವ್ಯವಸ್ಥೆ ಮಾಡಲಾಗಿದ್ದು, ಅವುಗಳಲ್ಲಿ ಟೂತ್ ಬ್ರಷ್, ಟಂಗ್ ಕ್ಲೀನರ್, ಸೋಪು, ಶಾಂಪು, ಬಾಚಣಿಕೆ ಸೇರಿ ದಿನನಿತ್ಯ ಬಳಕೆಯ ಸಾಮಗ್ರಿಗಳನ್ನು ಒದಗಿಸಲಾಗಿದೆ.
ರೈಲ್ವೆ ನಿಲ್ದಾಣದ ಪ್ಲ್ಯಾಟ್‌ಫಾರ್ಮನಲ್ಲಿರುವ ವಿವಿಧೋದ್ದೇಶ ಸ್ಟಾಲ್‌ನಲ್ಲಿ ಈ "ಟ್ರಾವೆಲಿಂಗ್ ಕಿಟ್" ಲಭ್ಯವಿದೆ.