ಧಾರವಾಡ: ನಿತ್ಯ ಕುಡಿದು ಬಂದು ಜಗಳವಾಡುತ್ತಿದ್ದ ಹೆತ್ತ ತಂದೆಯನ್ನೇ ಮಗ ಹತ್ಯೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ನಡೆದಿದೆ. ಪುಂಡಲೀಕ ಒಂಟಿಗಡ ಎಂಬಾತನೇ ಮಗನಿಂದ ಹತ್ಯೆಯಾದ ತಂದೆಯಾಗಿದ್ದಾರೆ. ಇನ್ನು ಹತ್ಯೆ ಮಾಡಿದ ಮಗ ಅಪ್ರಾಪ್ತ ಎಂದು ತಿಳಿದು ಬಂದಿದೆ.
ಕುಡಿದು ಬಂದು ತಾಯಿ ಜೊತೆ ಜಗಳ: ಅಪ್ಪನನ್ನೇ ಕೊಂದ ಅಪ್ರಾಪ್ತ ಮಗ - ಕುಡಿದು ಬಂದ ಜಗಳ ಮಾಡುತ್ತಿದ್ದ ತಂದೆಯ ಹತ್ಯೆ
ತಾಯಿ ಜೊತೆ ಕುಡಿದು ಬಂದ ಜಗಳ ಮಾಡುತ್ತಿದ್ದ ತಂದೆಯನ್ನೇ ಅಪ್ರಾಪ್ರ ಮಗ ಹತ್ಯೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ತಂದೆಯ ಕೊಲೆ
ಪುಂಡಲೀಕ ಪ್ರತಿನಿತ್ಯ ಮದ್ಯ ಕುಡಿದು ಬಂದು ಹೆಂಡತಿ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಬುಧವಾರ ಇದೇ ರೀತಿ ಪುಂಡಲೀಕ ಜಗಳವಾಡಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿ ಸ್ವತಃ ಮಗನೇ ತನ್ನ ತಂದೆಯನ್ನು ಕೊಡಲಿಯಿಂದ ಹತ್ಯೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಗರಗ ಠಾಣೆ ಪಿಎಸ್ಐ ಕಿರಣ ಮೋಹಿತೆ, ಸಿಪಿಐ ಪಾಟೀಲ ಹಾಗೂ ಡಿವೈಎಸ್ಪಿ ಸಂಕದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
(ಇದನ್ನೂ ಓದಿ: ಹುಚ್ಚನಂತೆ ಓಡೋಡಿ ಬಂದು ಮಕ್ಕಳೆದುರೇ ತಾಯಿಯನ್ನು ಬರ್ಬರವಾಗಿ ಕೊಂದ ಕೊಲೆಗಾರ!)