ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧವಾದ ಮಠವಾಗಿರುವ ಸದ್ಗುರು ಸಿದ್ಧಾರೂಡರ ಮಠದಲ್ಲಿ ಅನ್ನ ದಾಸೋಹಕ್ಕೆ ತನ್ನದೇ ಆದ ಪರಂಪರೆಯಿದೆ, ಈ ಪರಂಪರೆಗೆ ಮತ್ತಷ್ಟು ಅಧುನಿಕ ತಂತ್ರಜ್ಞಾನದ ಮೂಲಕ ಮುನ್ನಡೆಸಿಕೊಂಡು ಹೋಗಲು ಆಡಳಿತ ಮಂಡಳಿ ಹೊಸ ಯೋಜನೆಗೆ ಕೈ ಹಾಕಿದೆ.
ಸಿದ್ಧಾರೂಡರ ಸನ್ನಿದಾನಕ್ಕೆ ಸೋಲಾರ್ ತಂತ್ರಜ್ಞಾನ: ಅನ್ನದಾಸೋಹಕ್ಕೆ ವಿನೂತನ ಪ್ರಯತ್ನ ಹೌದು..ಶ್ರೀ ಮಠದ ಟ್ರಸ್ಟ್ ಕಮಿಟಿ ಹಾಗೂ ಭಕ್ತಾಧಿಗಳ ದೇಣಿಗೆಯ ಹಣದಿಂದ ಸುಮಾರು 59 ಲಕ್ಷ ರೂ.ವೆಚ್ಚದಲ್ಲಿ ಸಿದ್ಧಾರೂಡರ ಮಠದ ಅಡುಗೆ ಮನೆಗೆ ಸೋಲಾರ್ ಪವರ್ ವ್ಯವಸ್ಥೆ ಮಾಡಲಾಗಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮಠದಲ್ಲಿ ಸಾರ್ವಜನಿಕ ಅನ್ನದಾಸೋಹ ಬಂದ್ ಆಗಿದ್ದರೂ ಕೂಡ ಸಾಧು ಸಂತರ ಹಾಗೂ ಮಠದ ಸಿಬ್ಬಂದಿಗಾಗಿ ಅಡುಗೆ ಮಾಡಲಾಗುತ್ತಿದೆ. ಅಲ್ಲದೇ ಈಗ ಅಳವಡಿಸಿರುವ ಸೌರಶಕ್ತಿ ವ್ಯವಸ್ಥೆ ನಿತ್ಯ ಸುಮಾರು 5 ಸಾವಿರ ಜನರಿಗೆ ಅಡುಗೆ ಬೇಯಿಸುವ ಸಾಮರ್ಥ್ಯವನ್ನು ಹೊಂದಿದೆ.
ಸಿದ್ಧಾರೂಡರ ಮಠದ ಯಾತ್ರಿ ನಿವಾಸದ ಮೇಲೆ ವರ್ತುಲಾಕಾರದಲ್ಲಿ ಸೋಲಾರ್ ಪ್ಯಾನೆಲ್ ಕೂಡಿಸಲಾಗಿದೆ. ಬೆಳಗಾವಿಯ ಯುನಿಸನ್ಸ್ ಟೆಕ್ನಾಲಜಿಸ್ ಟೆಂಡರ್ ಪಡೆದಿದ್ದು, ಈಗಾಗಲೇ ಜೋಡಣೆ ಕಾರ್ಯಪೂರ್ಣಗೊಂಡಿದ್ದು, ಶೀಘ್ರವಾಗಿ ಕಾರ್ಯ ರೂಪಕ್ಕೆ ಬರಲಿದೆ.
ಅಷ್ಟೇ ಅಲ್ಲದೆ ಪರಿಸರ ಸಂರಕ್ಷಣೆಗೆ ಇದೊಂದು ಉತ್ತಮ ಉದಾಹರಣೆಯಾಗಲಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.