ಕರ್ನಾಟಕ

karnataka

ETV Bharat / city

ಸಭೆಗೆ ಸೀಮಿತವಾದ ಸ್ಮಾರ್ಟ್ ಸಿಟಿ ಯೋಜನೆ : ಪೂರ್ಣಗೊಳ್ಳದ ಕಾಮಗಾರಿಗಳು!? - smart city project failures

ಸ್ಮಾರ್ಟ್ ಸಿಟಿ ಯೋಜನೆ ಬಂದು ಅವಳಿನಗರ ಸ್ಮಾರ್ಟ್ ಆಗುತ್ತೆ ಎಂದುಕೊಂಡಿದ್ದವರಿಗೆ ನಿರಾಶೆಯಾಗಿದೆ. ಹುಬ್ಬಳ್ಳಿ- ಧಾರವಾಡವನ್ನು ಸ್ಮಾರ್ಟ್ ಮಾಡುವ ಬದಲು ಮಾಲಿನ್ಯ ಸಿಟಿಯಾಗಿ ಮಾಡಿದ್ದಾರೆ. ಅಲ್ಲದೇ ಮಹತ್ವದ ಯೋಜನೆ ಸಭೆ ಹಾಗೂ ಚರ್ಚೆಗೆ ಮಾತ್ರವೇ ಸೀಮಿತವಾಗಿದೆ. ಅವಧಿ ಪೂರ್ಣಗೊಂಡರೂ ಬಹುತೇಕ ಕಾಮಗಾರಿಗಳು ಮುಕ್ತಾಯಗೊಂಡಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿವೆ..

smart city project works are not completed in Hubli
ಪೂರ್ಣಗೊಳ್ಳದ ಕಾಮಗಾರಿಗಳು

By

Published : Apr 15, 2022, 3:43 PM IST

ಹುಬ್ಬಳ್ಳಿ(ಧಾರವಾಡ) :ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಸ್ಮಾರ್ಟ್ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಯೋಗದೊಂದಿಗೆ ಸ್ಮಾರ್ಟ್ ಸಿಟಿ ಯೋಜನೆ ತರಲಾಗಿದೆ. ಆದರೆ, ಇದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆಗೆ ಮಾತ್ರ ಸೀಮಿತವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅನೇಕ ಕಾಮಗಾರಿಗಳು ಪೂರ್ಣಗೊಂಡಿಲ್ಲ, ಪೂರ್ಣಗೊಂಡಿರುವ ಕಾಮಗಾರಿಗಳು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲವೆನ್ನುವ ಆರೋಪಗಳು ಕೇಳಿ ಬಂದಿವೆ.

ಇದನ್ನೂ ಓದಿ:ಬೆಂಗಳೂರಿನತ್ತ ಈಶ್ವರಪ್ಪ ಪಯಣ: ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರ ಕಣ್ಣೀರು

ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿಯೇ ಲಭ್ಯವಾಗುತ್ತಿಲ್ಲ. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ ಅಹ್ಮದ್ ಅವರು ಸಂಪರ್ಕಕ್ಕೂ ಸಿಗುತ್ತಿಲ್ಲ. ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆದು ಬಿಡಲಾಗಿದೆ. ಅಲ್ಲಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯವಾಗುತ್ತಿದೆಯೆಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.

ABOUT THE AUTHOR

...view details