ಹುಬ್ಬಳ್ಳಿ:ಹು-ಧಾ ಮಹಾನಗರದ ಪ್ರತಿಷ್ಠಿತ ಸಿದ್ಧಾರೂಢರ ಹೆಸರಿಟ್ಟುಕೊಂಡಿರುವ ನಗರ. ಈ ನಗರದ ಜನತೆಯ ನೂರಾರು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ದಿನನಿತ್ಯವೂ ಒಂದಿಲ್ಲೊಂದು ಭಯದಲ್ಲಿ ಬದುಕಿದ್ದ ಜನರ ಕಷ್ಟಗಳು ದೂರವಾಗಿವೆ. ಹಾಗಿದ್ದರೇ ಇಲ್ಲಿನ ಜನರ ಸಮಸ್ಯೆ, ಪರಿಹಾರ ಸಿಕ್ಕಿರುವುದಾದ್ರೂ ಏನು ಅಂತೀರಾ ಈ ಸ್ಟೋರಿ ನೋಡಿ..
ಸಿದ್ಧಾರೂಢನಗರ ಹಾಗೂ ಹೆಗ್ಗೇರಿ ಜನ ನಿರಾಳ.. ಓದಿ: ಕೆಂಪು ಕೋಟೆ ಮೇಲೆ ಬೇರೆ ಧ್ವಜ ಹಾರಿಸಿದವರು ಆರ್ಎಸ್ಎಸ್ ಮೂಲದವರು: ಉಗ್ರಪ್ಪ
ವಾಣಿಜ್ಯ ನಗರಿ ಹುಬ್ಬಳ್ಳಿಯ ಹೆಗ್ಗೇರಿ ಹಾಗೂ ಸಿದ್ಧಾರೂಢನಗರ ಜನರಿಗೆ ಹು-ಧಾ ಮಹಾನಗರ ಪಾಲಿಕೆಯ ಒಡೆತನದ ಕೃಷ್ಣಾಪುರ ಸರ್ವೆ ನಂ.130 ಸಿಟಿ ಸರ್ವೆ ನಂ.15/ಎರಲ್ಲಿ ಫಲಾನುಭವಿಗಳಿಗೆ ಪಾಲಿಕೆಯಿಂದ ಹಂಚಿಕೆ ಮಾಡಲಾದ ನಿವೇಶನವನ್ನು ಮಂಜೂರು ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.
1981ನೇ ಸಾಲಿನಲ್ಲಿ ಸ್ವಾಧೀನ ಪತ್ರ ನೀಡಿರುವ 207 ಪಲಾನುಭವಿಗಳಲ್ಲಿ ಮಹಾನಗರ ಪಾಲಿಕೆ ನಿಗದಿ ಪಡಿಸಿದ ಮೊತ್ತವನ್ನು 166 ಪಲಾನುಭವಿಗಳಿಗೆ ನಿವೇಶನ ಮಂಜೂರಾತಿ ಮಾಡಲು ನಿರ್ದೇಶನ ನೀಡಿರುವುದು ಹಲವಾರು ದಶಕದ ಹೋರಾಟಕ್ಕೆ ಜಯ ಸಿಕ್ಕಿದೆ.
ಇನ್ನುಳಿದ 41 ಪಲಾನುಭವಿಗಳು ಪಾವತಿಸಬೇಕಾದ ಬಾಕಿ ಇರುವ ಮೊತ್ತಕ್ಕೆ ನಿವೇಶನ ಹಂಚಿಕೆಯಾದ ದಿನದಿಂದ ಅನ್ವಯವಾಗುವಂತೆ ವಾರ್ಷಿಕ ಶೇ.8ರಷ್ಟು ಸರಳ ಬಡ್ಡಿಯೊಂದಿಗೆ ಒಟ್ಟು ಮೊತ್ತವನ್ನು ಮಹಾನಗರ ಪಾಲಿಕೆಗೆ ಪಾವತಿಸಿಕೊಂಡಿದೆ.
ನಿವೇಶನ ನೋಂದಣಿ ಮಾಡಿಕೊಡಲು ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ರ ಕಲಂ 176(6) ಅನ್ವಯ ಸರ್ಕಾರದ ಘಟನೋತ್ತರ ಮಂಜೂರಾತಿ ನೀಡಿದೆ.
ಹೆಗ್ಗೇರಿ ಹಾಗೂ ಸಿದ್ಧಾರೂಢನಗರದ ಜನರು ನಿಟ್ಟುಸಿರು ಬಿಡುವಂತಾಗಿದ್ದು, ಹೋರಾಟದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವ ವಹಿಸಿದ್ದರು. ಸುಮಾರು ದಶಕದ ನಿವೇಶನಗಳ ಹೋರಾಟಕ್ಕೆ ಜಯಸಿಕ್ಕಿದ್ದು, ಸಾರ್ವಜನಿಕರು ಹೊರಟ್ಟಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಿವೇಶನದ ಕುರಿತು ಸಿದ್ಧಾರೂಢ ನಗರ ಹಾಗೂ ಹೆಗ್ಗೇರಿ ನಿವಾಸಿಗಳು ಮಹಾನಗರ ಪಾಲಿಕೆಗೆ ಅಲೆದಾಡಿ ಹೈರಾಣಾಗಿದ್ದು, ಸಾಕಷ್ಟು ಮನವಿಯನ್ನು ನೀಡಿ ಅಳಲನ್ನು ತೋಡಿಕೊಂಡಿದ್ದರು. ಕೊನೆಗೂ ಸಿದ್ಧಾರೂಢರ ಆಶೀರ್ವಾದದಿಂದ ಫಲಾನುಭವಿಗಳ ನಿವೇಶನದ ಕನಸು ನನಸಾಗಿದೆ.