ಕರ್ನಾಟಕ

karnataka

ETV Bharat / city

RSS ಬಗ್ಗೆ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ: ಸಿಎಂ ಬಸವರಾಜ ಬೊಮ್ಮಾಯಿ - Chief Minister Basavaraja Bommayi

ಸಿದ್ದರಾಮಯ್ಯ ಆರ್​ಎಸ್​ಎಸ್​ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ಹೀಗೇ ಮಾಡಿಯೇ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಸ್ಥಾನ ಕಳೆದುಕೊಂಡಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕರ್ನಾಟಕವನ್ನೂ ಕಳೆದುಕೊಳ್ಳಲಿದೆ ಎಂದು ಸಿಎಂ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Basavaraja Bommai talked to Press
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮದವರೊಂದಿಗೆ ಮಾತನಾಡಿದರು.

By

Published : Jun 5, 2022, 10:50 AM IST

Updated : Jun 5, 2022, 12:46 PM IST

ಹುಬ್ಬಳ್ಳಿ:ಕಳೆದ 75 ವರ್ಷದಿಂದ ಆರ್.ಎಸ್.ಎಸ್ ಜನಸೇವೆ ಮಾಡುತ್ತಿದೆ. ಆದರೆ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಆರ್​ಎಸ್​ಎಸ್​ ಚಡ್ಡಿ ಸುಡುತ್ತೇವೆ ಎನ್ನುವ ಕೈ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆರ್​ಎಸ್​ಎಸ್​ ಉತ್ತಮ ದೇಶಭಕ್ತಿಯ ಕೆಲಸ‌ ಮಾಡಿದೆ. ಜನರು ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಿದೆ. ಆದರೆ ಕೆಲವು ಜನರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಸಿದ್ದರಾಮಯ್ಯ ಅಪಪ್ರಚಾರ ಮಾಡ್ತಿದ್ದಾರೆ. ಹೀಗೇ ಮಾಡಿಯೇ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಸ್ಥಾನ ಕಳೆದುಕೊಂಡಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕರ್ನಾಟಕವನ್ನೂ ಕಳೆದುಕೊಳ್ಳಲಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯಸಭಾ ಚುನಾವಣೆಯ ಬಗ್ಗೆ 10ನೇ ತಾರೀಖಿನವರೆಗೂ ಕಾದುನೋಡೋಣ ಎಂದ ಅವರು, ಪಠ್ಯ ವಿಚಾರದಲ್ಲೂ ರಾಜಕಾರಣ ಮಾಡ್ತಿದ್ದಾರೆ. ಅದಕ್ಕೆಲ್ಲವು ನಮ್ಮ ಶಿಕ್ಷಣ ಸಚಿವರು ಉತ್ತರ ನೀಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ:ಹೆಗಡೆಗೆ ಕೈಕೊಟ್ಟು, ಗೌಡರಿಗೆ ಘೋರ ಅನ್ಯಾಯವೆಸಗಿದ್ದ ಜಲದರ್ಶಿನಿ ವಾಸಿ ಸಿದ್ದರಾಮಯ್ಯ: ಬಿಜೆಪಿ ಟೀಕೆ

Last Updated : Jun 5, 2022, 12:46 PM IST

ABOUT THE AUTHOR

...view details